alex Certify ರಂಗೋಲಿಯ ಚಿತ್ತಾರ ಬಿಡಿಸಿದ ಮೀನುಗಾರನ ಬಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಗೋಲಿಯ ಚಿತ್ತಾರ ಬಿಡಿಸಿದ ಮೀನುಗಾರನ ಬಲೆ

Watch: Viral Video of Man Casting a Perfect Net is Casting a Spell on the Internet

ಪ್ರತಿ ಕಾರ್ಯ ಮಾಡಲು ಅದರದ್ದೇ ಆದ ಪರಿಣಿತಿ, ಕೌಶಲ ಅಗತ್ಯ. ಅದರಂತೆ, ಮೀನುಗಾರಿಕೆ, ಬಲೆ ಬೀಸುವುದೂ ಒಂದು ಅಪರೂಪದ ಕೌಶಲ್ಯ, ವ್ಯಕ್ತಿಯೊಬ್ಬ ಮೀನು ಹಿಡಿಯಲು ಬಲೆ ಬೀಸುವ ವಿಡಿಯೋವೊಂದು ರೆಡಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧವಾಗಿದೆ.

ಕೆಂಪು ಸೂಟ್ ಧರಿಸಿದ ವ್ಯಕ್ತಿ ಕೆಂಪು ಬಣ್ಣದ ಬಲೆಯನ್ನು ವೃತ್ತಾಕಾರವಾಗಿ ಹಾಕುವ ವಿಡಿಯೋ ಇದಾಗಿದೆ. ಆತ ಎಷ್ಟು ನಿಖರವಾಗಿ ಬಲೆ‌ ಎಸೆಯುತ್ತಾನೆ ಎಂದರೆ ಅದು ಸುಂದರ ರಂಗೋಲಿಯಂತೆ ನೀರಿನಲ್ಲಿ ಹರಡಿಕೊಳ್ಳುತ್ತದೆ. ವಿಡಿಯೋಕ್ಕೆ ರೆಡಿಟ್ ನಲ್ಲಿ 69 ಸಾವಿರ ಜನ ಅಪ್ ವೋಟ್ ನೀಡಿದ್ದಾರೆ. ಲೈಕ್, ಕಮೆಂಟ್ ಗಳ ಹೊಳೆ ಹರಿದಿದೆ‌.

“ನೂರಾರು ಬಾರಿ ಪ್ರಯತ್ನಿಸಿದರೂ ನನ್ನಿಂದ ಈ ರೀತಿ ಬಲೆ ಎಸೆಯಲು ಸಾಧ್ಯವಾಗಿಲ್ಲ. ನಾನು ಇವರನ್ನು ಗೌರವಿಸುತ್ತೇನೆ” ಎಂದು ಕೆ.ಸಿ. ಜಾದಿ ಎಂಬುವವರು ಕಮೆಂಟ್ ಮಾಡಿದ್ದಾರೆ. “ನಾನೂ ಈ ಬಲೆ ತಂದಿದ್ದೆ. ಸುಮಾರು 30 ಬಾರಿ ಪ್ರಯತ್ನಿಸಿದರೂ ನನ್ನ ಬಳಿ ಸಾಧ್ಯವಾಗಿಲ್ಲ. ಇದರಿಂದ ಪೆಟ್ಟಿಗೆಯಲ್ಲಿ ಇಟ್ಟಿದ್ದೇನೆ” ಎಂದು ನಿಕ್ಕಿಡಿ29 ಎಂಬ ಜಾಲತಾಣ ಬಳಕೆದಾರ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...