ಕೊರೊನಾ ವೈರಸ್ ಮಹಾಮಾರಿಯಿಂದ ಬಚಾವಾಗಲು ಸದ್ಯ ಅಮೆರಿಕ ಫೈಜರ್ ಲಸಿಕೆ ಮೇಲೆ ಭರವಸೆಯನ್ನಟ್ಟಿದೆ. ಅಮೆರಿಕದಲ್ಲಿ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆಯಾದರೂ ಸಹ ಜನರಿಗೆ ಲಸಿಕೆಯ ಮೇಲೆ ಇನ್ನೂ ಪೂರ್ಣ ವಿಶ್ವಾಸ ಮೂಡಿದಂತೆ ಕಂಡು ಬರ್ತಿಲ್ಲ.
ಹೀಗಾಗಿ ಜನರಿಗೆ ಕೊರೊನಾ ಲಸಿಕೆ ಸುರಕ್ಷತೆ ಬಗ್ಗೆ ಗ್ಯಾರಂಟಿ ನೀಡುವ ಸಲುವಾಗಿ ಈಗಾಗಲೇ ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಲೈವ್ನಲ್ಲೇ ಲಸಿಕೆ ಪಡೆದಿದ್ದಾರೆ.
ಇನ್ನು ಅಮೆರಿಕ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೋ ಕಾಟ್ರೇಜ್ ಕೂಡ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.
ಯಾವ ಕೆಲಸ ನನ್ನಿಂದ ಮಾಡಲು ಸಾಧ್ಯವಾಗಿಲ್ಲವೂ ನಾನು ಆ ಕೆಲಸವನ್ನ ಬೇರೆಯವರಿಗೆ ಮಾಡಿ ಎಂದು ಹೇಳೋದಿಲ್ಲ. ನಿನ್ನೆಯಷ್ಟೇ ಅಮೆರಿಕದಲ್ಲಿ ಲಸಿಕೆ ಪ್ರಯೋಗ ಆರಂಭವಾಗಿದ್ದು ನಾನು ಕೂಡ ಲಸಿಕೆ ಸ್ವೀಕಾರ ಮಾಡಿದ್ದೇನೆ. ಲಸಿಕೆಗೆ ಸಂಬಂಧಿಸಿದ ನಿಮ್ಮೆಲ್ಲ ಗೊಂದಲಕ್ಕೆ ಉತ್ತರ ನೀಡಲು ನಾನೆಂದಿಗೂ ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗೆ ಅಲೆಕ್ಸಾಂಡ್ರಿಯಾ ಉತ್ತರವನ್ನ ನೀಡಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ಸ್ವೀಕಾರದ ಬಳಿಕವೂ ಇನ್ನೊಂದು 5 ದಿನಗಳವರೆಗೆ ಎಲ್ಲಾ ಬೆಳವಣಿಗೆಗಳ ಮಾಹಿತಿ ನೀಡೋದಾಗಿ ಹೇಳಿದ್ದಾರೆ.
https://www.instagram.com/p/CI_VOLOHSbA/?utm_source=ig_web_copy_link