ನ್ಯೂಯಾರ್ಕ್: ಚಾಕಲೇಟ್ ನಿಂದ ಡಾಲ್ ಕಾರ್ಟೂನ್ ಪಾತ್ರಗಳು ಏನು ಮಾಡುವುದಿಲ್ಲ ಹೇಳಿ…..ಈಗ ಅದರ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಅಮೆರಿಕಾದ ಬಾಣಸಿಗರೊಬ್ಬರು ಚಾಕೊಲೇಟ್ ನಲ್ಲಿ ಟೆಲಿಸ್ಕೋಪ್ ಮಾಡಿದ್ದಾರೆ.
ಲಾಸ್ ವೆಗಾಸ್ ನ ಪಾಸ್ಟ್ರಿ ಅಕಾಡೆಮಿ ಮಾಲೀಕ ಹಾಗೂ ಬಾಣಸಿಗ ಅಮೌರಿ ಗಿಯ್ಕೋನ್ ಚಾಕಲೇಟ್ ನಲ್ಲಿ ಟೆಲಿಸ್ಕೋಪ್ ಮಾಡಿದ್ದು, ಮಾಡುವ ವಿಧಾನವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಚಾಕಲೇಟ್ ಮಾಡುವ ಅವರ ವಿಡಿಯೋಕ್ಕೆ 10 ದಿನದಲ್ಲಿ 2.3 ಮಿಲಿಯನ್ ಜನ ಪ್ರತಿಕ್ರಿಯೆ ನೀಡಿದ್ದಾರೆ.
ಅಮೌರಿ ಅವರು ತಮ್ಮ ಅಕಾಡೆಮಿಯಲ್ಲಿ 10 ವಾರಗಳ ಅಡುಗೆ ಮಾಡುವ ಕೋರ್ಸ್ ನ್ನು ಪ್ರಾರಂಭಿಸಿದ್ದಾರೆ.ಅವರ ಫೇಸ್ ಬುಕ್ ಪೇಜ್ ಗೆ 3.8 ಮಿಲಿಯನ್ ಫಾಲೋವರ್ ಗಳಿದ್ದಾರೆ. “5 ಅಡಿ ಉದ್ದದ ಚಾಕಲೇಟ್ ಟೆಲಿಸ್ಕೋಪ್ ಮಾಡುವ ವಿಸ್ತೃ ತ ವಿಧಾನ” ಎಂದು ಕ್ಯಾಪ್ಶನ್ ನೀಡಿದ್ದಾರೆ.
https://www.facebook.com/amauryguichon.chef/videos/367264554313885