
ಪ್ಲಾಸ್ಟಿಕ್ ವನ್ಯ ಜೀವಿಗಳಿಗೆ ಗಂಡಾಂತರ ತರುತ್ತಿದೆ. ಮೈಕ್ರೊ ಪ್ಲಾಸ್ಟಿಕ್ ಮಾಲಿನ್ಯ ಅಂಟಾರ್ಕ್‍ಟಿಕಾದಲ್ಲಿ ಆಗಿದೆ. ಗಿಡಗಳ ಮೇಲೆ ನ್ಯಾನೋ ಪ್ಲಾಸ್ಟಿಕ್ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪರಿಸರವಾದಿಗಳು ವಿಶ್ವಾದ್ಯಂತ ದೊಡ್ಡ ಪ್ರಮಾಣದ ಹೋರಾಟ ನಡೆಸಿದ್ದಾರೆ. ಫೆಸಿಪಿಕ್ , ಅಟ್ಲಾಂಟಿಕ್ ಹಾಗೂ ಹಿಂದು ಮಹಾ ಸಾಗರದ ಉಷ್ಣ ವಲಯ ಪ್ರದೇಶದಲ್ಲಿ ಕಂಡು ಬರುವ ಅಳಿವಿನ ಅಂಚಿನಲ್ಲಿರುವ ಹವಾಬಿಲ್ಸ್ ಸಮುದ್ರ ಆಮೆಗಳ ಕುತ್ತಿಗೆಗೆ ಪ್ಲಾಸ್ಟಿಕ್ ಬ್ಯಾಂಡ್ ಸುತ್ತಿಕೊಂಡ ವಿಡಿಯೋ ವೈರಲ್ ಆಗಿದೆ.
ಐ.ಎಫ್. ಎಸ್. ಅಧಿಕಾರಿ ಪರ್ವೀನ್ ಕಾಸ್ವಾನ್ ವಿಡಿಯೋ ಟ್ವೀಟ್ ಮಾಡಿದ್ದು, ಎರಡು ಸಮುದ್ರ ಆಮೆಗಳ ಕುತ್ತಿಗೆಗೆ ಹಸಿರು ಬ್ಯಾಂಡ್ ಸಿಕ್ಕಿ ಹಾಕಿಕೊಂಡಿದ್ದನ್ನು ಬಿಡಿಸಲಾಗಿದೆ. ನಮ್ಮ ಪ್ಲಾಸ್ಟಿಕ್ ತ್ಯಾಜ್ಯದಿಂದ ಸಮುದ್ರ ಆಮೆಗಳು ಹೇಗೆ ನಿಧಾನಕ್ಕೆ ತೊಂದರೆಗೆ ಈಡಾಗುತ್ತಿವೆ. ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಎಂದು ಪ್ಲಾಸ್ಟಿಕ್ ತ್ಯಾಜ್ಯ ಮಣಿಸಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.
ಇಂಟರ್ ನ್ಯಾಷನಲ್ ಟ್ರೇಡ್ ಎಂಡೆಂಜರ್ಡ್ ಸ್ಪೀಸೀಸ್ ಆಫ್ ವೈಲ್ಡ್ ಪ್ಲೋರಾ ಆ್ಯಂಡ್ ಫೌನಾ ಎಂಬ ಸಂಸ್ಥೆಯ ಸಂರಕ್ಷಿತ ಪಟ್ಟಿಯಲ್ಲಿ ಸಮುದ್ರ ಆಮೆಗಳು ಸೇರಿವೆ. 1993 ರಲ್ಲಿ ಅವುಗಳನ್ನು ಸಂರಕ್ಷಿತ ಪಟ್ಟಿಗೆ ಸೇರಿಸಲಾಗಿದೆ. ಬಹುತೇಕ ಸಮಯದಲ್ಲಿ ಅವು ಮೀನುಗಾರಿಕೆ ಬಲೆಗೆ ಸಿಕ್ಕಿ ಸಾಯುತ್ತಿವೆ.