
ಉತ್ತರ ಚೀನಾದ ಹೆಬೀ ಪ್ರಾಂತ್ಯದ ಹೆಂಗ್ಶುಯಿ ವನ್ಯಜೀವಿ ಧಾಮದಲ್ಲಿ ಮೂರು ತಿಂಗಳ ಹುಲಿ ಮರಿ ಹಾಗೂ ನಾಲ್ಕು ತಿಂಗಳ ಕೋತಿ ಮರಿ ಸ್ನೇಹಿತರಂತೆ ಆಟವಾಡುತ್ತವೆ. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಜನಿಸಿ, ಒಟ್ಟಿಗೆ ಬೆಳೆದ ಕಾರಣ ಇವೆರೆಡರ ನಡುವಿನ ಬಂಧ ಬಿಗಿಯಾಗಿದೆ ಅಂತಾ ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ,
ಕೋತಿ ಹಾಗೂ ಹುಲಿ ಒಟ್ಟಾಗಿ ಆಟವಾಡ್ತಾ ಇರೋದನ್ನ ನೋಡಿದ ಮೃಗಾಲಯದ ಅಧಿಕಾರಿಗಳು ಇವೆರಡಕ್ಕೆ ಒಟ್ಟಿಗೆ ಇರಲು ಅವಕಾಶ ನೀಡಿದ್ದಾರೆ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ ಹುಲಿಯ ಮರಿಯ ಬೆನ್ನಿನ ಮೇಲೆ ಕೋತಿ ಮರಿ ಕೂತು ಸವಾರಿ ಮಾಡಿದ್ದನ್ನ ನೋಡಬಹುದಾಗಿದೆ.