alex Certify ʼಆನ್ ಲೈನ್ʼ ತರಗತಿ ವೇಳೆಯೇ ನಡೆದ ಘಟನೆಯಿಂದ ಉಪನ್ಯಾಸಕ ತಬ್ಬಿಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆನ್ ಲೈನ್ʼ ತರಗತಿ ವೇಳೆಯೇ ನಡೆದ ಘಟನೆಯಿಂದ ಉಪನ್ಯಾಸಕ ತಬ್ಬಿಬ್ಬು

Watch: This Student Stages a Kidnapping with Help of Friends to Escape Online Classes

ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ಶಾಲೆ, ಕಾಲೇಜುಗಳ ತರಗತಿ, ಕಚೇರಿಗಳ ಸಭೆ, ಸಮಾರಂಭ ಎಲ್ಲವೂ ಆನ್ ಲೈನ್ ಮೂಲಕವೇ ನಡೆಯುತ್ತಿದೆ.

ಕಚೇರಿಯ ಸಭೆಗಾಗಲೀ, ಶಾಲೆ-ಕಾಲೇಜಿನ ತರಗತಿಗಾಗಲೀ ಹಾಜರಾಗುವುದೆಂದರೆ ಅನೇಕರಿಗೆ ಅಲರ್ಜಿ. ತಪ್ಪಿಸಿಕೊಳ್ಳಲು ಕುಂಟು ನೆಪ ಹೇಳುವುದೇ ಹೆಚ್ಚು.

ಬೇಸರ ತರಿಸುವ ತರಗತಿಗಾದರೆ ಬಂಕ್ ಮಾಡಬಹುದು. ನಗರ ಪ್ರದೇಶದಲ್ಲಿ ಸಾಧಾರಣವಾಗಿ ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್,‌ ಇಂಟರ್ ನೆಟ್ ಎಲ್ಲವೂ ಇದ್ದೇ ಇರುತ್ತದೆ. ಹೀಗಿರುವಾಗ ಆನ್ ಲೈನ್ ತರಗತಿಗೆ ಬಂಕ್ ಮಾಡುವುದು ಹೇಗೆ ? ನೆಪ ಹೇಳುವುದೇನು ?

ಆನ್ ಲೈನ್ ತರಗತಿ ನಡೆಯುತ್ತಾ ಇರುತ್ತದೆ. ಶಿಕ್ಷಕರು ಇನ್ನೇನು ಪಾಠ ಶುರು ಮಾಡಬೇಕು ಎಂದು ತಯಾರಿ ಮಾಡಿಕೊಳ್ಳುತ್ತಿದ್ದರೆ, ಅತ್ತ ಆನ್ ಲೈನ್ ನಲ್ಲಿದ್ದ ಒಂದಿಷ್ಟು ವಿದ್ಯಾರ್ಥಿಗಳು ಹಲ್ಕಿರಿದು ಮುಸಿಮುಸಿ ನಗುತ್ತಿರುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳತ್ತ ತಿರುಗುವರಷ್ಟರಲ್ಲಿ ವಿದ್ಯಾರ್ಥಿಯೊಬ್ಬನನ್ನು ಹಿಂದಿನಿಂದ ಬಂದ ಮುಸುಕುಧಾರಿಗಳಿಬ್ಬರು ಹೊತ್ತೊಯ್ಯುತ್ತಾರೆ.

ಇದನ್ನು ಕಂಡ ಶಿಕ್ಷಕರು ಗಾಬರಿಯಾಗಿ, ಒಂದು ಕ್ಷಣ ಅಲ್ಲೇನಾಗುತ್ತಿದೆ ಎಂಬುದನ್ನರಿಯದೆ ಕಕ್ಕಾಬಿಕ್ಕಿಯಾಗುತ್ತಾರೆ. ಟೈಲರ್ ಅಪಹರಣ ಆದಂತಿದೆ,‌ ಪೊಲೀಸರಿಗೆ ಕರೆ ಮಾಡೋಣ ಎಂದು ಬಡಬಡಾಯಿಸುತ್ತಾರೆ. ಆದರೆ, ಇನ್ನುಳಿದ ವಿದ್ಯಾರ್ಥಿಗಳು ಮಾತ್ರ ಕಿಲಕಿಲ ನಗುತ್ತಲೇ ಇರುತ್ತಾರೆ. ಅಪಹರಣ ಮಾಡಿದವರೂ ಆತನ ಸ್ನೇಹಿತರೆ ಎಂಬ ಅನುಮಾನವೂ ಬರುವಂತಿದೆ. ಇದೊಂದು ಅಪಹರಣ ನಾಟಕ ಎನಿಸುವಂತಿದೆ.

ವಿಡಿಯೋಗೆ 2.37 ಲಕ್ಷ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 67 ಸಾವಿರ ರಿ ಟ್ವೀಟ್ ಆಗಿದೆ.

https://twitter.com/Blayofficial/status/1308158981853138950?ref_src=twsrc%5Etfw%7Ctwcamp%5Etweetembed%7Ctwterm%5E1308158981853138950%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwatch-this-student-stages-a-kidnapping-with-help-of-friends-to-escape-online-classes-2901793.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...