ಇಂಗ್ಲೆಂಡ್: ಸಾಗರದಾಳದ ಜಗತ್ತು ಅದ್ಭುತ. ಅಲ್ಲಿನ ಪ್ರತಿ ಜೀವಿಯೂ ಅಚ್ಚರಿ ಹುಟ್ಟಿಸುತ್ತದೆ. ಅವುಗಳ ಜೀವನ ಶೈಲಿ ಅರಿಯುವುದೇ ಒಂದು ಸಂಭ್ರಮ. ಮೀನು, ತಿಮಿಂಗಿಲ, ಆಮೆ, ಸಸ್ಯಗಳು ಹೀಗೆ ವಿಭಿನ್ನ ದೈಹಿಕ ಸ್ವರೂಪದ ಕೋಟ್ಯಂತರ ಜೀವಿಗಳು ಅಲ್ಲಿವೆ.
ಯುಕೆ ಮರೈನ್ ಕನ್ಸರ್ವೇಷನ್ ಸೊಸೈಟಿ ಸೆ.24 ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ನಿಮ್ಮನ್ನು ಮಂತ್ರಮುಗ್ಧ ಗೊಳಿಸುತ್ತದೆ. ಕೀತ್ ಬೋರ್ಸ್ ಡೆನ್ ಎಂಬುವವರು ವಿಡಿಯೋ ನೀಡಿದ್ದಕ್ಕೆ ಕನ್ಸರ್ವೇಷನ್ ಸೊಸೈಟಿ ಅಭಿನಂದನೆ ಸಲ್ಲಿಸಿದೆ. ವಿಡಿಯೋ ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಜನ ರಿ ಟ್ವೀಟ್ ಮಾಡಿದ್ದಾರೆ.
30 ಸೆಕೆಂಡ್ ನ ಈ ವಿಡಿಯೋದಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತೀರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಯಾನೆಯಾ ನ್ಯಾನರಕಿ ಎಂಬ ಹೆಸರಿನ ನೀಲಿ ಜಲ್ಲಿ ಮೀನು ಸಮುದ್ರದಲ್ಲಿ ಈಜುವ ದೃಶ್ಯವಿದೆ. ಕಡು ನೀಲಿ ಬಣ್ಣದ ಈ ಮೀನು ತನ್ನ ತಳ ಭಾಗದಲ್ಲಿ ಬೆಳಕು ಚೆಲ್ಲುತ್ತ ನೀಲಿ ಸಮುದ್ರದಲ್ಲಿ ಈಜುವುದನ್ನು ನೋಡುವುದೇ ನಯನ ಮನೋಹರ.