alex Certify ಕ್ರಿಸ್​ಮಸ್​​ ಜೆಲ್ಲಿ ಕೇಕ್​ ಎಂದಾದರೂ ಸವಿದಿದ್ದೀರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​​ ಜೆಲ್ಲಿ ಕೇಕ್​ ಎಂದಾದರೂ ಸವಿದಿದ್ದೀರಾ..?

ನೀವೇನಾದರೂ ಸುಂದರವಾದ ಕೇಕ್​ಗಳನ್ನ ಇಷ್ಟಪಡುವರಾಗಿದ್ದರೆ ಈ ಕೇಕ್​ನ ಫೋಟೋ ನಿಮಗೆ ಇಷ್ಟವಾಗದೇ ಇರದು.

2019 ರಲ್ಲಿ ಮೊದಲ ಬಾರಿಗೆ ಅಪ್​ಲೋಡ್​ ಆಗಿದ್ದ ಈ ವಿಡಿಯೋ ಇದೀಗ ಚಳಿಗಾಲ ಆರಂಭವಾಗ್ತಿದ್ದಂತೆ ಮತ್ತೊಮ್ಮೆ ವೈರಲ್​ ಆಗಿದೆ. ಜೆಲ್ಲಿಯಲ್ಲಿ ನಿರ್ಮಾಣವಾದ ಈ ಕೇಕ್​​ ನೆಟ್ಟಿಗರ ಬಾಯಲ್ಲಿ ನೀರೂರಿಸಿದೆ.

ಟ್ರೇನಲ್ಲಿ ಜೆಲ್ಲಿ ಬಳಸಿ ಕೇಕ್​ ಮಾಡೋದನ್ನ ಬಹಳ ಸುಂದರವಾಗಿ ತೋರಿಸಲಾಗಿದೆ. ಕ್ರಿಸ್​ಮಸ್​​ ಮಾದರಿಯಲ್ಲಿ ನಿರ್ಮಾಣವಾದ ಈ ಕೇಕ್​​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನ ನೋಡಿದ ನೆಟ್ಟಿಗರಲ್ಲಿ ಒಬ್ಬರು ನನಗೂ ಈ ರೀತಿ ಕೇಕ್​ಗಳನ್ನ ಮಾಡಬೇಕೆಂಬ ಆಸೆ. ಆದರೆ ಫಲಿತಾಂಶ ಯಾವ ರೀತಿ ಬರುತ್ತೋ ಎಂದು ಭಯವಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಇಷ್ಟು ಸುಂದರವಾದ ಕೇಕ್​ಗಳನ್ನ ಕತ್ತರಿಸಿ ತಿನ್ನೋಕೆ ಮನಸ್ಸು ಬರಲ್ಲ ಎಂದಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...