ಕೊರೊನಾ ಲಾಕ್ ಡೌನ್ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ ಶ್ರೀಲಂಕಾ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ.
ಹೌದು, ಶ್ರೀಲಂಕಾ ನೌಕಾ ಸೇನೆ ತನ್ನ ಮೊದಲ ಜಲಾಂತರ್ಗಾಮಿ ವಸ್ತು ಸಂಗ್ರಹಾಲಯ ಆರಂಭಿಸಿದ್ದು, ಬುಧವಾರ ಉದ್ಘಾಟನೆ ಆಗಿದೆ.
ಶ್ರೀಲಂಕಾ ರಾಜಧಾನಿ ಗಾಲೆಯಲ್ಲಿ ಆರಂಭಗೊಂಡಿರುವ ಈ ಅಂಡರ್ ವಾಟರ್ ವಸ್ತುಸಂಗ್ರಹಾಲಯ ಸುಮಾರು 50 ಅಡಿ ಆಳದಲ್ಲಿ ಇರಲಿದೆ. ಇದನ್ನು ನೌಕಾ ಪಡೆಯ ವೈಸ್ ಅಡ್ಮಿರಲ್ ಪಿಯಲ್ ಡಿ ಸಿಲ್ವಾ ಉದ್ಘಾಟಿಸಿದರು. ಈ ಮೂಲಕ ಮುತ್ತು ರತ್ನ ಹಾಗೂ ಮೀನುಗಾರಿಕೆ ಪ್ರೋತ್ಸಾಹಿಸುವ ಉದ್ದೇಶವಿದೆ.