alex Certify ಎದೆ ನಡುಗಿಸುವಂತಿದೆ ಈ ಅಪಘಾತದ ದೃಶ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಈ ಅಪಘಾತದ ದೃಶ್ಯ….!

ನಿಯಂತ್ರಣ ತಪ್ಪಿದ ಕಾರೊಂದು ಸ್ಪೀಡಾಗಿ ಬಂದು ಬಳಿಕ ಗಾಳಿಯಲ್ಲಿ ಹಾರಿ ಪ್ರಾರ್ಥನಾ ಮಂದಿರದ ಗೋಡೆಗೆ ಅಪ್ಪಳಿಸಿದ ಘಟನೆ ಆಫ್ರಿಕಾದ ಸೋಮೆರ್​ ಸೆಟ್​ ಬೀದಿಯಲ್ಲಿ ನಡೆದಿದೆ. ಸಿನೀಮಿಯ ರೀತಿಯಲ್ಲಿ ನಡೆದ ಈ ಅಪಘಾತದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಾರು ಹಾರುತ್ತಿದ್ದ ವೇಳೆ ಅದರಲ್ಲಿ ಬೆಂಕಿಯ ಕಿಡಿ ಕೂಡ ಉತ್ಪತ್ತಿಯಾಗಿದೆ. ಆಂಡ್ರ್ಯೂಸ್​ ಶಾಲೆಯ ಪ್ರಾರ್ಥನಾ ಮಂದಿರದ ಗೋಡೆಗೆ ಬಡಿಯುವ ಮೊದಲು ಕಾರು 15 ಅಡಿ ಎತ್ತರದಲ್ಲಿ ಗಾಳಿಯಲ್ಲಿ ಹಾರಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ದಕ್ಷಿಣ ಆಫ್ರಿಕಾ ಪೊಲೀಸ್​ ಇಲಾಖೆ ವಕ್ತಾರ ಕ್ಯಾಪ್ಟನ್​ ಮಾಲಿ ಗೋವೆಂದರ್​, ನಿಯಂತ್ರಣ ತಪ್ಪಿದ ಚಾಲಕ ಕಾರನ್ನ ಪ್ರಾರ್ಥನಾ ಮಂದಿರದ ಗೋಡೆಗೆ ಬಡಿದಿದ್ದಾನೆ. ಸ್ವಲ್ಪ ಮಿಸ್​ ಆಗಿದ್ರೂ ಕಾರು ನೇರವಾಗಿ ಪ್ರಾರ್ಥನಾ ಮಂದಿರಕ್ಕೆ ಹೋಗಿ ಬೀಳುತ್ತಿತ್ತು. ಕಾರಿನ ಚಾಲಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾತ್ರಿಯ ಸಮಯದಲ್ಲಿ ಜನರಿಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಅಂತಾ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...