ಅಸೆಂಬ್ಲಿ ನಡೆಯುತ್ತಿರುವಾಗಲೇ ಸಂಭವಿಸಿದ ಭೂಕಂಪ: ವಿಡಿಯೋ ವೈರಲ್ 01-01-2021 8:09AM IST / No Comments / Posted In: Latest News, International ಡಿಸೆಂಬರ್ 29ರಂದು ನಡೆದ ಭೂಕಂಪದಿಂದಾಗಿ ಸ್ಲೋವೇನಿಯನ್ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡದಲ್ಲಿ ಶಾಸಕರನ್ನ ಸ್ಥಳಾಂತರಿಸಬೇಕಾಯ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ವರದಿ ಪ್ರಕಾರ ಭೂಕಂಪದಿಂದಾಗಿ ಅಸೆಂಬ್ಲಿ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಂಡಿದೆ. ಅದನ್ನ ಬಿಟ್ಟರೆ ಕಟ್ಟಡಕ್ಕೆ ಇನ್ಯಾವುದೇ ಗಂಭೀರ ಹಾನಿ ಉಂಟಾಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದಾರೆ. ಭೂಕಂಪ ನಡೆದ ವೇಳೆ ಅಸೆಂಬ್ಲಿಯಲ್ಲಿದ್ದ ಶಾಸಕರು ವ್ಯಕ್ತಪಡಿಸಿದ ಭಾವನೆ ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಡಿಸೆಂಬರ್ 29ರ ಮಂಗಳವಾರ ಉಂಟಾದ ಭೂಕಂಪ ರಿಕ್ಟರ್ ಮಾಪಕದಲ್ಲಿ -6.4 ತೀವ್ರತೆಯನ್ನ ದಾಖಲಿಸಿದೆ. Slovenian lawmakers had to evacuate the National Assembly during a 6.4-magnitude earthquake on Tuesday. The chamber experienced some damages from the earthquake, the second to recently hit the area. pic.twitter.com/ZmnkQCfKHN — NowThis Impact (@nowthisimpact) December 30, 2020