ಸುದ್ದಿ ವಾಹಿನಿಯಲ್ಲಿ ಇನ್ನೇನು ಲೈವ್ ಹೋಗಬೇಕು ಎನ್ನುವಷ್ಟರಲ್ಲಿ ಟಿವಿ ವರದಿಗಾರರೊಬ್ಬರಿಗೆ ರಕೂನ್ ಒಂದು ಅಡ್ಡ ಬಂದ ಘಟನೆ ಶ್ವೇತ ಭವನದ ಎದುರು ನಡೆದಿದೆ.
ಸಿಎನ್ಎನ್ ವಾಹಿನಿಯ ಹಿರಿಯ ಕರೆಸ್ಪಾಂಡೆಂಟ್ ಆಗಿರುವ ಜೋ ಜಾನ್ಸ್ ರಕೂನ್ ನೋಡಿ, ‘ಗೆಟ್ ಲಾಸ್ಟ್’ ಎಂದು ಕೂಗುತ್ತಿರುವ ದೃಶ್ಯಾವಳಿ ವೈರಲ್ ಆಗಿದೆ.
ಅಧ್ಯಕ್ಷರ ಆರೋಗ್ಯದ ಸ್ಥಿತಿಗತಿ ಬಗ್ಗೆ ಲೈವ್ ವರದಿ ಕೊಡುವವರಿದ್ದ ಜಾನ್ಸ್ಗೆ ರಕೂನ್ ಅಡ್ಡಿ ಬಂದಿದೆ. ಕ್ಯಾಮೆರಾ ಬೆಳಕಿಗೆ ಆಕರ್ಷಿತಗೊಂಡ ಈ ರಕೂನ್ಗಳು ಅಲ್ಲಿಗೆ ಬಂದಿವೆ ಎನ್ನಲಾಗಿದೆ.