
ಕಾರು ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಕಾರು ಓಹಿಯೋದ ಅಲೈಯನ್ಸ್ನಲ್ಲಿ ನದಿಗೆ ಬಂದು ಬಿದ್ದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬರುವ ವೇಳೆಗೆ ಭಾಗಶಃ ಕಾರು ನೀರಿನಲ್ಲಿ ಮುಳುಗಿಹೋಗಿತ್ತು.
ಮಂಜುಗಡ್ಡೆಯಂತಿದ್ದ ನೀರಿನಲ್ಲಿದ್ದ ಮಹಿಳೆಯನ್ನ ರಕ್ಷಿಸೋದು ಪೊಲೀಸರಿಗೆ ಸವಾಲಿನ ವಿಚಾರವಾಗಿತ್ತು. ಮೊದಲು ಮಹಿಳೆಯನ್ನ ಕಾರಿನಿಂದ ಹೊರಗೆಳೆಯಲು ಮುಂದಾದ ಪೊಲೀಸರು ಮಾನವ ಸರಪಳಿ ನಿರ್ಮಿಸಿದ್ರು. ಹಾಗೂ ಮಹಿಳೆಯನ್ನ ಜೀವಂತವಾಗಿ ಕಾರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.