ತಾಂತ್ರಿಕ ದೋಷ ಕಾಣಿಸಿಕೊಂಡ ವಿಮಾನವೊಂದು ದಟ್ಟ ಅರಣ್ಯ, ಸಮತಟ್ಟಿಲ್ಲದ ಪ್ರದೇಶದಲ್ಲಿ ಲ್ಯಾಂಡ್ ಆಗಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಬ್ರೆಜಿಲ್‌ನಲ್ಲಿ ನಡೆದಿರುವ ಈ ಘಟನೆಯನ್ನು ವ್ಯೂಲಿಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ವಿಡಿಯೊದಲ್ಲಿ ತುರ್ತು ಲ್ಯಾಂಡ್ ಮಾಡಬೇಕೆಂದು ಪೈಲೆಟ್ ಸ್ಥಳಕ್ಕಾಗಿ ಹುಡುಕಾಡುತ್ತಿದ್ದು, ವಿಮಾನ ನಿಲ್ಲುವಷ್ಟು ಜಾಗ ಕಾಡಿನಲ್ಲಿ ಸಿಕ್ಲಿಲ್ಲ. ಬಹುಸಮಯದ ನಂತರ, ರಸ್ತೆಯೊಂದು ಕಾಣಿಸಿದ್ದು, ಅಲ್ಲಿಯೇ ಲ್ಯಾಂಡ್ ಮಾಡಿದ್ದಾರೆ. ಸುತ್ತಲು ಮರಗಳಿದ್ದರೂ ರಿಸ್ಕ್ ತಗೆದುಕೊಂಡು ಲ್ಯಾಂಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದು, ಈ ರೀತಿ ಸಾಹಸವನ್ನು ನೋಡಿಲ್ಲ. ಈ ಹಿಂದೆ ಹಲವು ಸಾಹಸಮಯ ಲ್ಯಾಂಡ್ ನೋಡಿದ್ದೇನೆ. ಆದರೆ ಇದು ಅತ್ಯಂತ ಕಷ್ಟವಾಗಿರುವುದು ಎಂದಿದ್ದಾರೆ. ಇದಕ್ಕೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
https://twitter.com/flyezequiel/status/1270142966024286211?ref_src=twsrc%5Etfw%7Ctwcamp%5Etweetembed%7Ctwterm%5E1270142966024286211&ref_url=https%3A%2F%2Fwww.news18.com%2Fnews%2Fbuzz%2Fwatch-pilot-lands-aircraft-in-the-middle-of-a-dense-jungle-kiren-rijiju-is-awed-2664603.html