ಪಾಕಿಸ್ತಾನದ ಪತ್ರಕರ್ತರು ಸಚಿವರ ಸುದ್ದಿಗೋಷ್ಠಿಯನ್ನೇ ಬಾಯ್ಕಾಟ್ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಾಕಿಸ್ತಾನ ಪತ್ರಕರ್ತರ ಈ ಧೈರ್ಯಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಮಾಹಿತಿಯ ಪ್ರಕಾರ, ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಸುದ್ದಿಗೋಷ್ಠಿಗಾಗಿ ಪತ್ರಕರ್ತರು ನಿಗದಿತ ಅವಧಿಗಿಂತ 2 ಗಂಟೆ ಹೆಚ್ಚು ಕಾಲ ಕಾದಿದ್ದಾರೆ. ಸಚಿವರು 2 ಗಂಟೆಗಳ ಬಳಿಕ ಸುದ್ದಿಗೋಷ್ಠಿ ನಡೆಸಲು ಬರುತ್ತಿದ್ದಂತೆಯೇ, ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ನೀವು ನಮಗೆ ಸಮಯವನ್ನ ನೀಡಿಲ್ಲ. ಹೀಗಾಗಿ ಈ ಸುದ್ದಿಗೋಷ್ಠಿಯನ್ನ ನಾವು ಬಾಯ್ಕಾಟ್ ಮಾಡುತ್ತಿದ್ದೇವೆ ಎಂದು ಹೇಳಿ ಮೈಕ್ಗಳನ್ನ ತೆಗೆದುಕೊಂಡು ಹೋಗಿದ್ದಾರೆ.
ವಿಡಿಯೋದ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಯು ಪಾಕಿಸ್ತಾನದ ಜೆಲುಮ್ ಎಂಬಲ್ಲಿ ನಡೆದಿದೆ.
27 ಸೆಕೆಂಡ್ಗಳ ಈ ವಿಡಿಯೋ 3.43 ಲಕ್ಷ ವೀವ್ಸ್ ಪಡೆದುಕೊಂಡಿದೆ. ಪತ್ರಕರ್ತರ ಕಾರ್ಯಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
https://www.facebook.com/indiatimes/videos/227352382513059/