alex Certify ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವ ಮುನ್ನ ಇದನ್ನೊಮ್ಮೆ ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವ ಮುನ್ನ ಇದನ್ನೊಮ್ಮೆ ನೋಡಿ…!

Watch: Pack of Stray Dogs Wait Patiently for Traffic to Stop before Crossing Busy Road in China

ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್​ ಸಿಗ್ನಲ್​ ಒಮ್ಮೆ ಬಿತ್ತು ಅಂದ್ರೆ ಸಾಕು. ಗ್ರೀನ್​ ಲೈಟ್​ ಬರುವವರೆಗೂ ಕಾಯೋದು ಅನೇಕರಿಗೆ ಕಷ್ಟವೇ. ಎಷ್ಟೋ ಬಾರಿ ವಿದ್ಯಾವಂತರೇ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋದಿದೆ. ನೀವು ಇದೇ ರೀತಿ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋರೇ ಆಗಿದ್ರೆ ಈ ವಿಡಿಯೋವನ್ನ ಒಮ್ಮೆ ನೋಡಲೇಬೇಕು.

ಚೀನಾದಲ್ಲಿ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ ನಾಯಿಗಳ ಗುಂಪೊಂದು ರೆಡ್​ ಲೈಟ್​ ಬರುವವರೆಗೂ ಕಾದು ರಸ್ತೆ ದಾಟಿವೆ. ವಾಹನಗಳು ಪಾಸ್​ ಆಗುವವರೆಗೂ ಕಾದ ಶ್ವಾನಗಳ ಗುಂಪು ಬಳಿಕ ರಸ್ತೆ ದಾಟಿವೆ.

ಈಶಾನ್ಯ ಚೀನಾ ಭಾಗದ ಡೆಲಿಯಾನ್​​ ನಗರದ ಸ್ಥಳೀಯರೊಬ್ಬರು ಈ ಸುಂದರ ದೃಶ್ಯವನ್ನ ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಟ್ರಾಫಿಕ್​ ಕ್ಲಿಯರ್​ ಆಗುವವರೆಗೂ ಗುಂಪಾಗೇ ಫುಟ್​ಪಾತ್​ನಲ್ಲಿ ನಿಂತು ಕಾದ ಶ್ವಾನಗಳು ಬಳಿಕ ಗುಂಪಾಗಿಯೇ ರಸ್ತೆ ದಾಟಿವೆ. ಈ ವಿಡಿಯೋ ಚೀನಾದ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದ್ದು ಕೆಲವೇ ಗಂಟೆಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ. ಶ್ವಾನಗಳ ವಿಡಿಯೋ ನೋಡಿದ ಅನೇಕರು ಇವುಗಳು ನಿಜವಾದ ನಾಗರಿಕರು ಅಂತಾ ಕಮೆಂಟ್​ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...