ಕಥೆಗಳಲ್ಲಿ, ಸಿನಿಮಾಗಳಲ್ಲಿ ಕಲ್ಪನೆಗಷ್ಟೇ ಸಿಗಲು ಸಾಧ್ಯ ಇಂಥ ದೃಶ್ಯ. ಆದರೆ, ಇಲ್ಲೊಬ್ಬ ಬಾಲಕ ಇದನ್ನ ನಿಜ ಮಾಡಲು ಹೊರಟಿದ್ದಾನೆ.
ಹಾಗೇ ಸುಮ್ಮನೆ ಪುಸ್ತಕದ ಪುಟಗಳನ್ನು ತಿರುವಿಹಾಕಿ ಅಲ್ಲಿರುವ ಪಾಠಗಳನ್ನೆಲ್ಲ ಆಪೋಶನ ತೆಗೆದುಕೊಂಡರೆ ಸಾಕು, ಅಷ್ಟೂ ವಿಷಯಗಳು ಸ್ಮೃತಿಪಟಲದಲ್ಲಿ ಕಚ್ಚಿಕೊಂಡು ಕೂತುಬಿಡುತ್ತದೆ.
ಎಲ್ಲ ಪಾಠಗಳನ್ನೂ ಅರೆದು ಕುಡಿದ ಈತ, ಮೆದುಳಿನಲ್ಲಿ ಕೂತ ಉತ್ತರವನ್ನು ಅದೆಲ್ಲೇ ಹುದುಗಿದ್ದರೂ ಹೆಕ್ಕಿ ತೆಗೆದು ಪರೀಕ್ಷೆ ಬರೆಯಬಲ್ಲ. ಚೀನಾದ ಶಾಲೆಯೊಂದರಲ್ಲಿ ರಸಪ್ರಶ್ನೆಗಾಗಿ ನಡೆದ ತಯಾರಿ ಇದು.
ಅಚ್ಚರಿ ಎನಿಸಿದರೂ ಇದು ನಿಜ. ಈತ ನಡೆಸಿದ ಆ ಚಮತ್ಕಾರೀ ವಿದ್ಯೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರೂ ಇದನ್ನು ಅನುಸರಿಸಿ ಯಶಸ್ವಿ ಆಗಲಾರರು. ಚೀನಾದ ಬಾಲಕನಿಗೆ ಮಾತ್ರ ಇದು ಸಾಧ್ಯ. ಏಕೆ ಗೊತ್ತೇ ? ಈ ವಿಡಿಯೋವನ್ನೊಮ್ಮೆ ನೀವೇ ಸಂಪೂರ್ಣ ನೋಡಿಬಿಡಿ.