ನದಿಯಲ್ಲಿ ಕೈಯಾಕಿಂಗ್ ಮಾಡುತ್ತಿದ್ದ ವೇಳೆ ಮೊಸಳೆಯೊಂದು ದಾಳಿ ಮಾಡಿ ವ್ಯಕ್ತಿಯನ್ನು ನೀರಿಗೆ ಬೀಳಿಸಿದ ಮೈ ಜುಮ್ಮೆನ್ನಿಸುವ ಪ್ರಸಂಗವೊಂದು ನಡೆದಿದೆ.
ಕಾಡಿನ ನಡುವೆ ಶಾಂತ ರೀತಿಯಲ್ಲಿ ಕಯಾಕಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಮೊಸಳೆ ದೋಣಿಯನ್ನು ಕೆಡವಿದೆ. ಕಯಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಹೆಡ್ ಕ್ಯಾಮರಾದಲ್ಲಿ ರೋಚಕ ಕ್ಷಣ ದಾಖಲಾಗಿದ್ದು, ಈಗ ವೈರಲ್ ಆಗಿದೆ.
ಉತ್ತರ ಕೆರೊಲಿನಾದ ಪೀಟ್ ಜಾಯ್ಸ್, ಮೊಸಳೆ ದಾಳಿಗೆ ಸಿಲುಕಿದವರು. ಘಟನೆಯಲ್ಲಿ ಅದೃಷ್ಟವಶಾತ್ ಪೀಟ್ ದೋಣಿ ಪಲ್ಟಿ ಹೊಡೆಯದಂತೆ ಪಕ್ಕದಲ್ಲಿದ್ದ ಮರದ ಕೊಂಬೆ ಹಿಡಿಯುವಲ್ಲಿ ಸಫಲರಾದರು.
ಹಾಗೆಯೇ ಮೊಸಳೆಯು ತನ್ನ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶದಿಂದ ಅದನ್ನು ಹೆದರಿಸುವ ಸಲುವಾಗಿ ಮೂರು ಬಾರಿ ಕೈಯಾಕನ್ನು ಬಡಿದು ಶಬ್ದ ಮಾಡಿದ್ದಾರೆ. ನಂತರ ಸಾಧ್ಯವಾದಷ್ಟು ವೇಗವಾಗಿ ಅಲ್ಲಿಂದ ದೋಣಿ ಚಲಾಯಿಸಿಕೊಂಡು ಬಂದು ಆಪತ್ತಿನಿಂದ ಪಾರಾದೆ ಎಂದು ತಿಳಿಸಿದ್ದಾರೆ.