ಡಿಸೆಂಬರ್ 21ರಂದು ಪರಸ್ಪರ ಭಾರೀ ಸನಿಹಕ್ಕೆ ಬಂದಿದ್ದ ಶನಿ ಹಾಗೂ ಗುರು ಗ್ರಹಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿದ ಅನೇಕ ಚಿತ್ರಗಳು ನೆಟ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರೀ ಇಷ್ಟ ಪಟ್ಟಿದ್ದಾರೆ.
17ನೇ ಶತಮಾನದಲ್ಲಿ, ಗೆಲಿಲಿಯೋ ಕಾಲದಲ್ಲಿ ಈ ರೀತಿಯ ವಿದ್ಯಮಾನ ಘಟಿಸಿತ್ತು. ಇದೀಗ 367 ವರ್ಷಗಳ ಬಳಿಕ ಈ ಎರಡೂ ಗ್ರಹಗಳು ಮತ್ತೊಮ್ಮೆ ಇಷ್ಟು ಸನಿಹಕ್ಕೆ ಬಂದಿವೆ.
ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಗುರು ಹಾಗೂ ಶನಿ ಹಾದು ಹೋಗುತ್ತಿರುವಂತೆ ಸೆರೆ ಹಿಡಿದ ಚಿತ್ರಗಳು ಹಾಗೂ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಛಾಯಾಗ್ರಾಹಕ ಫ್ಲಾರಿಯಾನ್ ಕ್ರಾಯ್ಶ್‌ಬೌಮರ್ ಈ ಚಿತ್ರಗಳು ಹಾಗೂ ಟೈಮ್ ಲ್ಯಾಪ್ಸ್ ವಿಡಿಯೋಗಳನ್ನು ಸೆರೆ ಹಿಡಿದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.