
ದೈತ್ಯಾಕಾರಿ ಪಾಂಡಾಗಳು ತಮ್ಮ ಆಮೆಗತಿಯ ಚಲನೆಯಿಂದಲೂ ಪರಿಚಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದ ಯಾ’ಆನ್ ಪ್ರದೇಶದಲ್ಲಿ ಗುಡ್ಡವೊಂದನ್ನು ಭಾರೀ ಹುಮ್ಮಸ್ಸಿನಲ್ಲಿ ಏರುತ್ತಿರುವ ಉತ್ಸಾಹದ ಚಿಲುಮೆಯಾಗಿರುವ ದೈತ್ಯ ಪಾಂಡಾವೊಂದರ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಗಾರಿ ಹೆಸರಿನ ಹಳ್ಳಿಯೊಂದರ ನಿವಾಸಿ ಅ ಚೂ ಎಂಬಾತ ಈ ವಿಡಿಯೋ ಮಾಡಿದ್ದಾರೆ.
ಇದೇ ರೀತಿಯ ಮತ್ತೊಂದು ವಿಡಿಯೋವೊಂದರಲ್ಲಿ, ಪಾಂಡಾಗಳ ಉಸೇನ್ ಬೋಲ್ಟ್ ಎಂಬ ನಿಕ್‌ನೇಮ್‌ಧಾರಿ ಪಾಂಡಾವೊಂದು ಗುಡ್ಡವೊಂದನ್ನು ಓಡಿಕೊಂಡು ಏರುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.