
ಕುಡಿತದ ಅಮಲಿನಲ್ಲಿ ಬಟ್ಟೆ ಒಣಗಿಸುವ ಯಂತ್ರದೊಳಗೆ ಸಿಲುಕಿಕೊಂಡಿದ್ದ ಬ್ರಿಟಿಷ್ ಯುವತಿಯೊಬ್ಬಳನ್ನು ರಕ್ಷಿಸಲು ಅಗ್ನಿಶಾಮಕ ದಳದವರನ್ನು ಕರೆತರಿಸಬೇಕಾದ ಘಟನೆ ಜರುಗಿದೆ. ಈ ಘಟನೆಯ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹಂಚಿಕೊಳ್ಳಲಾಗಿದೆ.
21 ವರ್ಷದ ಕಾಲೇಜು ಯುವತಿ ರೋಸಿ ಕೋಲ್ ತನ್ನ ಮನೆಯಲ್ಲಿದ್ದ ಸಹಚರರೊಂದಿಗೆ ಸ್ವಲ್ಪ ಏರಿಸಿಕೊಂಡು ಟೈಟ್ ಆದ ಕೂಡಲೇ ಡ್ರೈಯರ್ನ ಒಳಗೆ ಹೋಗುವ ಸವಾಲು ಸ್ವೀಕರಿಸಿದ್ದಾಳೆ. ಹೇಗೋ ಕಷ್ಟಪಟ್ಟು ಒಳತೂರಿಕೊಂಡ ಆಕೆ ಅಲ್ಲೇ ಸ್ಟಕ್ ಆಗಿಬಿಟ್ಟಿದ್ದಾಳೆ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಆಕೆಯನ್ನು ರಕ್ಷಿಸಬೇಕಾಯಿತು.