ಕುಡಿತದ ಮತ್ತಿನಲ್ಲಿದ್ದ ಯುವತಿಯೊಬ್ಬರು ತಮ್ಮ ಕಾರನ್ನು ರೈಲು ಹಳಿಗಳ ಮೇಲೆ ಒಂದು ಕಿಮೀಗಿಂತ ಹೆಚ್ಚಿನ ದೂರ ಡ್ರೈವಿಂಗ್ ಮಾಡಿರುವ ಘಟನೆ ಸ್ಪೇನ್‌ನ ಮಲಗಾ ನಗರದಲ್ಲಿ ಜರುಗಿದೆ.
ಘಟನೆಯ ದೃಶ್ಯಾವಳಿಗಳನ್ನು ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದೆ. ಸುರಂಗವೊಂದರ ಆರಂಭದಲ್ಲಿ ಕಾರು ಹಳಿಗಳಿಗೆ ತಗುಲಿ ಹಾಕಿಕೊಂಡಿದ್ದು, ಈ ಕಾರಣದಿಂದಾಗಿ ರೈಲು ಸಂಚಾರ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದೆ. ಮಲಾಗಾ ಮೆಟ್ರೋ ಸೇವೆಯ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಟೋ ಟ್ರಕ್ ತಂದು ಆ ಕಾರನ್ನು ಅಲ್ಲಿಂದ ಮೇಲೆ ಎತ್ತಲಾಗಿದೆ.
25 ವರ್ಷದ ಈ ಯುವತಿ ನಿಗದಿತ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚು ಮದ್ಯಪಾನ ಮಾಡಿರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ. ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.