
ಒಂದು ಕಾಲದಲ್ಲಿ ಪ್ರವಾಸಿ ತಾಣವಾಗಿದ್ದ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಕೋತಿಗಳಿಗೆ ಆಹಾರದ ಪೊಟ್ಟಣಗಳನ್ನ ವಿತರಿಸುತ್ತಿದ್ದರು. ಆದರೆ ಈಗ ಕೊರೊನಾದಿಂದಾಗಿ ಪ್ರವಾಸಗಳು ರದ್ದಾಗಿದೆ. ಈ ಕೋತಿಗಳು ಆಹಾರಕ್ಕಾಗಿ ಪರದಾಡುವಂತಾಗಿದೆ. ಎಷ್ಟೋ ಕೋತಿಗಳು ಆಹಾರಕ್ಕಾಗಿ ಮನುಷ್ಯರ ಮೇಲೆ, ಕಟ್ಟಡಗಳ ಮೇಲೂ ದಾಳಿ ಮಾಡಿವೆಯಂತೆ.
ಕೊರೊನಾ ಸಂಕಷ್ಟದ ನಡುವೆಯೂ ಇಲ್ಲಿನ ಜನರು ಕೋತಿಗಳಿಗೆ ಪಾನೀಯಗಳನ್ನ ಕೊಡುತ್ತಿದ್ದರು. ಆದರೆ ಸಕ್ಕರೆ ಪ್ರಮಾಣ ಜಾಸ್ತಿ ಇರುವ ಪಾನೀಯಗಳು ಕೋತಿಗಳನ್ನ ಉದ್ರೇಕ ಮಾಡುತ್ತವೆ ಎಂಬ ಕಾರಣಕ್ಕೆ ಸ್ಥಳೀಯ ಆಡಳಿತ ಇದಕ್ಕೆ ನಿರ್ಬಂಧ ಹೇರಿದೆ. ಅಲ್ಲದೇ ಈ ಭಾಗದಲ್ಲಿ ಕೋತಿಗಳ ಸಂಖ್ಯೆಯೂ ಜಾಸ್ತಿಯಾಗಿದ್ದು ಜನರಿಗೆ ತುಂಬಾನೇ ಕಿರಿಕಿರಿಯುಂಟಾಗಿದೆ.