ಸಾಮಾಜಿಕ ಜಾಲತಾಣಗಳಲ್ಲಿ ಶ್ವಾನದ ಮುದ್ದಾದ ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಶ್ವಾನದ ಮುದ್ದಾದ ಚಟುವಟಿಕೆಗಳು ನೆಟ್ಟಿಗರ ಮನ ಗೆಲ್ಲುವಲ್ಲಿ ಎಂದಿಗೂ ವಿಫಲವಾಗೋದಿಲ್ಲ.
ಇದೀಗ ದಕ್ಷಿಣ ಆಫ್ರಿಕಾದ ಶ್ವಾನದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಶೇರ್ ಆಗ್ತಿದೆ. ಈ ವಿಡಿಯೋದಲ್ಲಿ ಪೂಲ್ನಲ್ಲಿ ಬಿದ್ದಿದ್ದ 15 ವರ್ಷದ ಚುಕಿ ಹೆಸರಿನ ಪೊಮೆರಿಯನ್ ಶ್ವಾನವನ್ನ ಜೆಸ್ಸಿ ಎಂಬ ನಾಯಿ ಕಾಪಾಡಿದೆ.
ಶ್ವಾನದ ರಕ್ಷಣಾ ಕಾರ್ಯದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ.
ಪೂಲ್ನ ತುತ್ತ ತುದಿಯಲ್ಲಿ ನಿಂತಿದ್ದ ಚುಕಿ ಆಯತಪ್ಪಿ ನೀರಿಗೆ ಬಿದ್ದಿತ್ತು. ನೀರಿನಲ್ಲಿ ಈಜುತ್ತಿದ್ದ ಚುಕಿಯನ್ನ ಲ್ಯಾಬ್ರಡರ್ ತಳಿಯ ಜೆಸ್ಸಿ ಪಾರು ಮಾಡಿದೆ . ತನ್ನ ಹಲ್ಲಿನ ಸಹಾಯದಿಂದ ಜೆಸ್ಸಿಯನ್ನ ಕಾಪಾಡಲಾಗಿದೆ.
ಈ ಘಟನೆ ನಡೆದ ವೇಳೆ ಮಾಲೀಕ ದಂಪತಿ ಮನೆಯಲ್ಲೇ ಇದ್ದರು. ತಮ್ಮ ಶ್ವಾನಗಳು ಒದ್ದೆಯಾಗಿ ಇರೋದನ್ನ ಕಂಡು ಮಾಲೀಕ ದಂಪತಿ ಶಾಕ್ಗೆ ಒಳಗಾದ್ರು. ಇದಾದ ಬಳಿಕ ಸೆಕ್ಯೂರಿಟಿ ಕ್ಯಾಮರಾ ಚೆಕ್ ಮಾಡಿದ ವೇಳೆ ಈ ವಿಚಾರ ತಿಳಿದುಬಂದಿದೆ. ಶ್ವಾನದ ಸಮಯಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
https://www.facebook.com/byron.thanarayen/videos/10159255943431686/?t=115