ಸುದ್ದಿ ವಾಹಿನಿಯ ನೇರ ಪ್ರಸಾರದ ಆಂಕರಿಂಗ್ ಮಾಡುವುದು ಯಾವಾಗಲೂ ಸವಾಲಿನ ಕೆಲಸ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಈ ಸವಾಲು ಇನ್ನೂ ಹೆಚ್ಚೇ ಇರುತ್ತದೆ.
ಫಾಕ್ಸ್ 46 ವರದಿಗಾತಿ ಆಂಬರ್ ರಾಬರ್ಟ್ಸ್ ಉತ್ತರ ಕರೋಲಿನಾದ ಅಲೆಕ್ಸಾಂಡರ್ ಕೌಂಟಿಯಲ್ಲಿ ಪ್ರವಾಹದ ಪರಿಸ್ಥಿತಿಯ ನೇರ ವರದಿಗಾರಿಕೆ ಮಾಡುತ್ತಿದ್ದರು. ವರದಿಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲೇ ಸೇತುವೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಈ ವೇಳೆ ರಾಬರ್ಟ್ಸ್ ಹಾಗೂ ಅವರ ಕ್ಯಾಮೆರಾಮನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಪ್ರವಾಹದ ನೀರನ್ನು ಕಂಡು ಬೆಚ್ಚಿರುವ ರಾಬರ್ಟ್ಸ್‌ರನ್ನು ಕಾಣಬಹುದಾಗಿದೆ. ನೀರಿನ ಭೋರ್ಗರೆತವನ್ನು ಕಂಡ ವರದಿಗಾರ್ತಿ “ರೋಮಾಂಚಕ,” ಎಂದಿದ್ದಾರೆ. “ಓಕೆ ನಾವು ಹಿಂತೆಗೆಯುತ್ತಿದ್ದೇವೆ. ರಸ್ತೆ ಕುಸಿಯುವುದನ್ನು ಕಂಡಿದ್ದೇವೆ. ನಾವು ಕೆಲವು ಸೆಕೆಂಡ್‌ಗಳ ಹಿಂದೆ ನಿಂತಿದ್ದ ರಸ್ತೆಯೂ ಕುಸಿದು ಹೋಗುವುದನ್ನು ಕಂಡಿದ್ದೇವೆ” ಎಂದು ವರದಿಗಾತಿ ಹೇಳುತ್ತಿರುವಂತೆಯೇ ಕ್ಯಾಮೆರಾಮನ್ ಆಕೆಯ ಹಿಂದೆ ಫೋಕಸ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.