
ಮನಿ ಹೇಸ್ಟ್ ಸೀರಿಸ್ನಲ್ಲಿ ತೋರಿಸಿದಂತೆ ಬ್ರೆಜಿಲ್ನಲ್ಲೂ ಬ್ಯಾಂಕ್ ಮೇಲೆ ದರೋಡೆ ನಡೆಸಲಾಗಿದೆ. ಹಾಗೂ ದರೋಡೆಕೋರರು ಕದ್ದ ಹಣವನ್ನ ಬೀದಿಯಲ್ಲಿ ಹರಡಿ ಎಸ್ಕೇಪ್ ಆಗಿದ್ದಾರೆ.
ಡಿಸೆಂಬರ್ 1ರ ಮಧ್ಯರಾತ್ರಿ ಸುಮಾರು 10 ವಾಹನಗಳಲ್ಲಿ ಬಂದ 30 ದರೋಡೆಕೋರರು ಕ್ರಿಸಿಯುಮಾಗೆ ಪ್ರವೇಶ ಮಾಡಿದ್ರು. ಜನರನ್ನ ಒತ್ತಾಯಾಳಾಗಿಸಿಕೊಂಡ ಅವರು ಸ್ಥಳೀಯ ಬ್ಯಾಂಕೊದನ್ನ ಲೂಟಿ ಮಾಡಿದ್ದಾರೆ.
ದರೋಡೆಕೋರರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಾಮಕಿ ಸದ್ದಿಗೆ ಎಚ್ಚರಗೊಂಡ ಸ್ಥಳೀಯರು ರಸ್ತೆಯಲ್ಲಿ ರಾಶಿ ರಾಶಿ ಹಣಬಿದ್ದಿದ್ದನ್ನ ನೋಡಿದ್ದಾರೆ. ಕೂಡಲೇ ರಸ್ತೆಗಿಳಿದ ಜನರು ನಗದು ರಾಶಿಯನ್ನ ಸಂಗ್ರಹಿಸಿದ್ದಾರೆ. ಇನ್ನೂ ಸ್ಪಲ್ಪ ಹಣ ಗಾಳಿಗೆ ಹಾರಿ ಹೋಗಿದೆ ಅಂತಾ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕದ್ದ ಹಣದ ನಿಖರ ಮೊತ್ತವನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ, ಆದಾಗ್ಯೂ, ನಗರದಾದ್ಯಂತ ಎಸೆದ ಹಣವನ್ನು ಸಂಗ್ರಹಿಸುತ್ತಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.