ಲಂಡನ್: ಇತ್ತೀಚೆಗೆ ಬ್ರಿಟನ್ ನಲ್ಲಿ ನಡೆದ ವಯೋಲಿನ್ ಸಂಗೀತ ಕಚೇರಿಯೊಂದು ಜನರ ಗಮನ ಸೆಳೆದಿದೆ. ಏಕೆಂದರೆ ಅದು ತೇಲುವ ಸಂಗೀತ ಕಚೇರಿಯಾಗಿತ್ತು.
ಡೇನಿಯಲ್ ಹೋಪ್ ಎಂಬುವವರು ಫ್ರಾಗ್ ಸಮೀಪ ಇರುವ ವಲ್ತವಾ ನದಿಯಲ್ಲಿ ವಯೋಲಿನ್ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ. ಈ ಮೂಲಕ ಕೊರೊನಾದಿಂದ ಬೇಸರಗೊಂಡಿದ್ದ ಜನರ ಮನದಲ್ಲಿ ಮಂದಹಾಸ ಮೂಡಿಸಿದ್ದಾರೆ. ಕೆಲವರು ಬೋಟ್ ಮೇಲೆ, ಇನ್ನು ಕೆಲವರು ಬ್ರಿಜ್ ಮೇಲೆ ಹಾಗೂ ನದಿ ದಡದಲ್ಲಿ ನಿಂತು ಈ ವಿಶೇಷ ಪ್ರದರ್ಶನ ವೀಕ್ಷಿಸಿ ಖುಷಿಪಟ್ಟರು.
ಇಟಾಲಿಯನ್ ಪ್ರಸಿದ್ಧ ಸಂಗೀತಕಾರ ಮ್ಯಾಕ್ಸ್ ರ್ಯೂಚರ್ ಅವರ ಫೋರ್ತ್ ಸೀಸನ್ ಹಾಡನ್ನು ವಯೋಲಿನ್ ಮೂಲಕ ಸಂಗೀತಗಾರರ ತಂಡ ನುಡಿಸಿದೆ. ರಾಯಿಟರ್ಸ್ ಟ್ವಿಟರ್ ಖಾತೆಯಲ್ಲಿ ಕಾರ್ಯಕ್ರಮದ ವಿಡಿಯೋ ಹಾಕಲಾಗಿದೆ.