
ಚಾಂಗ್ಕಿಂಗ್ನಲ್ಲಿರುವ ಬ್ರಿಟಿಷ್ ಕಾನ್ಸುಲ್ ಜನರಲ್ ಸ್ಟೀಫನ್ ಎಲಿಸನ್ ನದಿಯೊಂದರ ಬಳಿ ಅಡ್ಡಾಡ್ಡುತ್ತಿದ್ದ ವೇಳೆ 24 ವರ್ಷದ ಯುವತಿ ಬಂಡೆಯಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ.
ಈಜಲು ಬಾರದೇ ನದಿಯಲ್ಲಿ ಪರದಾಡುತ್ತಿದ್ದ ಮಹಿಳೆಯನ್ನ ಕಂಡ 61 ವರ್ಷದ ರಾಜತಾಂತ್ರಿಕ ಆಕೆಯನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.