ಪುಟಾಣಿ ಹೆಣ್ಣು ಜಿರಾಫೆಯೊಂದು ತನ್ನ ನೆರಳನ್ನ ಮೊದಲ ಬಾರಿಗೆ ಕಂಡು ಆಶ್ಚರ್ಯ ಹೊರಹಾಕಿದ್ದು ಈ ಮುದ್ದುಮುದ್ದಾದ ವಿಡಿಯೋ ನೆಟ್ಟಿಗರ ಮನಸ್ಸಿಗೆ ಖುಷಿ ನೀಡಿದೆ. 1 ನಿಮಿಷದ ವಿಡಿಯೋದಲ್ಲಿ ಜಿರಾಫೆಯು ಮೊದಲ ಬಾರಿಗೆ ತನ್ನನ್ನ ನೆರಳನ್ನ ಕಂಡ ಬಳಿಕ ಮುಗ್ದಳಂತೆ ವರ್ತಿಸಿದೆ.
ಆಸ್ಟ್ರೇಲಿಯಾದ ಮೊನಾರ್ಟೊ ಸಫಾರಿ ಪಾರ್ಕ್ನಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ಪುಟಾಣಿ ಜಿರಾಫೆಯು ಮೇ 7ರಂದು ಜನಿಸಿದೆ.
ಈ ವಿಡಿಯೋವನ್ನ ಮೇ 21ರಂದು ಸೆರೆಹಿಡಿಯಲಾಗಿದೆ. ಕೊರಾಂಗೋ ಎಂಬ ಜಿರಾಫೆಯು ಈ ಮರಿ ಜಿರಾಫೆಯ ತಾಯಿಯಾಗಿದೆ. ಇಲ್ಲಿಯವರೆಗೆ ಸಪಾರಿ ಪಾರ್ಕ್ ಸಿಬ್ಬಂದಿ ಮರಿ ಜಿರಾಫೆಗೆ ನಾಮಕರಣ ಮಾಡಿಲ್ಲ.ಈ ವಿಡಿಯೋ ಬರೋಬ್ಬರಿ 90 ಸಾವಿರ ವೀವ್ಸ್ ಸಂಪಾದಿಸಿದೆ.