
ಸ್ಟೆಲ್ಲಾ ಮಾರ್ಟಿನ್ ಎಂಬ ಬಾಲಕಿ ಕಳೆದ ತಿಂಗಳು ನ್ಯೂ ಮೆಕ್ಸಿಕೋ ಹಾಸ್ಟಿಟಲ್ನಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಬಾಲಕಿಗೆ ಬೀಳ್ಕೊಟ್ಟ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ.
ಕೊರೊನಾದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ನಾಲ್ಕು ವರ್ಷದ ಬಾಲಕಿ ಸ್ಟೆಲ್ಲಾ ಮಾರ್ಟಿನ್ ಯುಎನ್ಎಂ ಆಸ್ಪತ್ರೆಯಿಂದ ಕೊನೆಗೂ ಡಿಸ್ಚಾರ್ಜ್ ಆಗಿದ್ದಾಳೆ. ಬಾಲಕಿ ಡಿಸ್ಚಾರ್ಜ್ ಆದ ವೇಳೆ ಅಲ್ಲಿದ್ದ ಸಿಬ್ಬಂದಿ ಚಪ್ಪಾಳೆ ತಟ್ಟುತ್ತಿರೋದನ್ನ ನೀವು ಕಾಣಬಹುದಾಗಿದೆ.
ನಾವು ಆಕೆ ಗುಣಮುಖಳಾಗಿದ್ದನ್ನ ಹಾಗೂ ಆಕೆಯನ್ನ ರಕ್ಷಿಸೋಕೆ ಪೋಷಕರಂತೆ ಸೇವೆ ಸಲ್ಲಿಸಿದ್ದ ಆರೋಗ್ಯ ಸಿಬ್ಬಂದಿ ಶ್ರಮವನ್ನ ನಾವಿಲ್ಲಿ ಸಂಭ್ರಮಿಸುತ್ತಿದ್ದೇವೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.