ವಾಷಿಂಗ್ ಮಷಿನ್ ಸ್ಫೋಟಗೊಂಡ ಘಟನೆಯೊಂದು ನಡೆದಿದ್ದು, ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. ವಾಷಿಂಗ್ ಮಷಿನ್ ಕಂಪೆನಿ ಕೂಡ ಈ ಬಗ್ಗೆ ತನಿಖೆ ಮಾಡಲು ಮುಂದಾಗಿದೆ.
ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋ ಮೂಲದ ಲಾರಾ ಬಿರ್ರೆಲ್ ಎಂಬಾಕೆ ತಮ್ಮ ಮನೆಯ ಅಡುಗೆ ಮನೆಯಲ್ಲಿ ಸ್ಫೋಟಗೊಂಡು ಛಿದ್ರವಾದ ವಾಷಿಂಗ್ ಮಷಿನ್ ಫೋಟೋವನ್ನು ಹಾಕಿ ಗಮನ ಸೆಳೆದಿದ್ದರು. ಇದನ್ನು ನೋಡಿದ ನೆಟ್ಟಿಗರು ವಾಷಿಂಗ್ ಮಷಿನ್ ಕೂಡ ಸ್ಫೋಟಗೊಳ್ಳುತ್ತದೆಯೇ ಎಂದು ಪ್ರಶ್ನೆ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗ್ರಾಹಕರು, ಬ್ಯಾಂಕ್ ಗಳಿಗೂ ಗುಡ್ ನ್ಯೂಸ್: ನೆಟ್ ಬ್ಯಾಂಕಿಂಗ್ ಆಟೋ ಪೇಮೆಂಟ್ ನಿಯಮ ಮುಂದೂಡಿಕೆ
ಸ್ಫೋಟಗೊಂಡು ಹೊಗೆ ತುಂಬಿದ್ದು, ಅದರ ಪಾರ್ಟ್ಸ್ ಹರಡಿ ಬಿದ್ದಿದೆ ಎಂಬ ವಿವರಣೆಯೊಂದಿಗೆ ಆಕೆ ಫೋಟೋ ಶೇರ್ ಮಾಡಿದ್ದರು. ಅದೃಷ್ಟವಶಾತ್ ನಾನು ಹೊಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರಿಂದ ಅದನ್ನು ತಕ್ಷಣ ಸ್ವಿಚ್ ಆಫ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಸಂಬಂಧಪಟ್ಟ ವಾಷಿಂಗ್ ಮಷಿನ್ ಕಂಪೆನಿಯು ಇಂಜಿನಿಯರ್ ಅನ್ನು ಆಕೆಯ ಮನೆಗೆ ಕಳಿಸಿ ತನಿಖೆ ಮಾಡಿಸಿ ನೈಜ ಸಂಗತಿ ಏನೆಂದು ವರದಿ ಪಡೆದುಕೊಳ್ಳುವುದಾಗಿ ಹೇಳಿದೆ.