ಇಂಗ್ಲೆಂಡ್: ಇಂಗ್ಲೆಂಡ್ ನಾಟಿಂಗ್ ಹ್ಯಾಂನಲ್ಲಿ ಕಲಾವಿದ ಬ್ಯಾಂಕ್ಸ್ಕಿ ಬಿಡಿಸಿದ ಪ್ರಸಿದ್ಧ ಭಿತ್ತಿ ಚಿತ್ರದ ಎದುರಿದ್ದ ಸೈಕಲ್ ಕಳುವಾಗಿದೆ ಎಂಬ ವದಂತಿ ಹಬ್ಬಿತ್ತು.
ಅ.13 ರಂದು ಬ್ಯಾಂಕ್ಸ್ಕಿ ಅವರು ಕಲಾಕೃತಿ ರಚಿಸಿದ್ದರು. ಅದಕ್ಕೆ ಹೊಂದಿಕೆಯಾಗುವಂತೆ ಕಲಾಕೃತಿಯ ಎದುರು ಹಳೆಯ ಸೈಕಲ್ ನ್ನು ಅಪರಿಚಿತ ವ್ಯಕ್ತಿಯೊಬ್ಬರು ತಂದು ನಿಲ್ಲಿಸಿದ್ದರು.
ಆದರೆ, ಇದ್ದಕ್ಕಿದ್ದಂತೆ ಸೈಕಲ್ ನಾಪತ್ತೆಯಾಗಿತ್ತು. ಸೈಕಲ್ ಕಳುವಾಗಿದೆ ಎಂದು ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಕಲಾಕೃತಿಗೆ ಧಕ್ಕೆಯಾಗದಿರಲಿ ಎಂದು ಇನ್ನೊಬ್ಬ ವ್ಯಕ್ತಿ ತಮ್ಮ ಸೈಕಲ್ ನ್ನು ಅಲ್ಲಿ ತಂದು ನಿಲ್ಲಿಸಿಟ್ಟಿದ್ದರು ಕೂಡ.
ಆದರೆ, ನಾಟಿಂಗ್ ಹ್ಯಾಂ ಸ್ಥಳೀಯ ಆಡಳಿತ ಈ ಕುರಿತು ಸ್ಪಷ್ಟನೆ ನೀಡಿದೆ. ಕಲಾಕೃತಿ ಹಾಗೂ ಸೈಕಲ್ ಸಂರಕ್ಷಣೆಯ ದೃಷ್ಟಿಯಿಂದ ತಾವೇ ಅದನ್ನು ಬೀದಿ ಬದಿಯಿಂದ ಸ್ಥಳಾಂತರ ಮಾಡಿ ಸಂರಕ್ಷಿಸಿದ್ದಾಗಿ ತಿಳಿಸಿದೆ.