ಕೊರೊನಾ ವೈರಸ್ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್ಗಳು ಕ್ಯಾನ್ಸಲ್ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ ಅಮೆರಿಕದ ಕಂಪನಿ ಮುಂದಿನ ವರ್ಷ ವಿಶೇಷವಾದ ಟೂರ್ ಒಂದನ್ನ ಆಯೋಜಿಸಿದೆ.
12 ಸಾವಿರ ಅಡಿ ಆಳದಲ್ಲಿ ಇರುವ ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡುವ ಜಲಾಂತರ್ಗಾಮಿ ಪ್ರವಾಸ ಮುಂದಿನ ವರ್ಷದಿಂದ ಆರಂಭವಾಗಲಿದೆ. ಓಷನ್ ಗೇಟ್ ಎಕ್ಸ್ಪೆಡಿಶನ್ಸ್ ಕಂಪನಿ ಮುಂದಿನ ವರ್ಷದ ಬೇಸಿಗೆಯಿಂದ ಈ ಪ್ರವಾಸವನ್ನ ಆರಂಭಿಸಲಿದೆ.
ಟೈಟಾನಿಕ್ ಸರ್ವೇ ಎಕ್ಸ್ಪೆಡಿಶನ್ 2021 ಯೋಜನೆಯಡಿಯಲ್ಲಿ ನಡೆಯಲಿರುವ ಈ ಪ್ರವಾಸದಲ್ಲಿ ಭಾಗಿಯಾಗಬೇಕು ಅಂದರೆ 12500 ಡಾಲರ್ಗಳನ್ನ ಪಾವತಿಸಿ ದರ್ಶನ ಮಾಡಬಹುದಾಗಿದೆ. ಇನ್ನು ಪ್ರವಾಸಕ್ಕೆ ಬರುವವರಿಗೆ ಮೊದಲೇ ಕೆಲ ತರಬೇತಿಗಳನ್ನ ನೀಡಲಾಗುತ್ತೆ ಎಂದು ಕಂಪನಿ ತಿಳಿಸಿದೆ.