alex Certify ಡ್ರಂಕ್​ & ಡ್ರೈವ್​ ಪ್ರಕರಣದಲ್ಲಿ ಎಲ್ಲ ದಾಖಲೆ ಮುರಿದಿದ್ದಾನೆ ಈ ಚಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಂಕ್​ & ಡ್ರೈವ್​ ಪ್ರಕರಣದಲ್ಲಿ ಎಲ್ಲ ದಾಖಲೆ ಮುರಿದಿದ್ದಾನೆ ಈ ಚಾಲಕ…!

ಮದ್ಯಪಾನ ಮಾಡಿಕೊಂಡು ವಾಹನ ಚಲಾವಣೆ ಮಾಡೋದು ಅತ್ಯಂತ ಅಪಾಯಕಾರಿ. ಹೀಗಾಗಿಯೇ ಪೊಲೀಸರು ಅಲ್ಲಲ್ಲಿ ಚಾಲಕರು ಮದ್ಯಪಾನ ಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲನೆ ಮಾಡುತ್ತಾರೆ.

ಮದ್ಯಪಾನ ಮಾಡಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸಲೆಂದೇ ಇರುವ ಸಾಧನದಲ್ಲಿ ಬಾಯಿಯಿಂದ ಊದಲು ಹೇಳುವ ಮೂಲಕ ಪೊಲೀಸರು ಡ್ರಂಕ್​ & ಡ್ರೈವ್​ ಪರೀಕ್ಷೆ ಮಾಡುತ್ತಾರೆ. ಇದರಲ್ಲಿ ಎಷ್ಟು ರೀಡಿಂಗ್​ ತೋರಿಸುತ್ತದೆ ಎಂಬುದನ್ನ ಆಧರಿಸಿ ಪೊಲೀಸರು ದಂಡ ವಿಧಿಸಬಹುದು ಇಲ್ಲವೇ ಗಾಡಿಯನ್ನ ವಶಕ್ಕೆ ಪಡೆಯಬಹುದು.

ಆದರೆ ಇತ್ತೀಚಿಗೆ ಉತ್ತರ ಐರ್ಲೆಂಡ್​ನ ವ್ಯಕ್ತಿಯೋರ್ವ ಬ್ರಿಟನ್​ ಇತಿಹಾಸದಲ್ಲೇ ಅತ್ಯಂತ ಅಧಿಕ ಪ್ರಮಾಣದಲ್ಲಿ ಮದ್ಯಪಾನ ರೀಡಿಂಗ್​ ದಾಖಲಿಸಿದ್ದಾನೆ. ಸಾಧನದಲ್ಲಿದ್ದ ರೀಡಿಂಗ್​ನ್ನು ಕಂಡ ಪೊಲೀಸರೇ ಈತ ಇಷ್ಟೊಂದು ಪ್ರಮಾಣದಲ್ಲಿ ಮದ್ಯಪಾನ ಮಾಡಿ ಅದೇಗೆ ಕಾರು ಚಲಾಯಿಸಿದ ಎಂದು ಶಾಕ್​ ಆಗಿದ್ದಾರೆ. ವ್ಯಕ್ತಿಯ ರೀಡಿಂಗ್​​ ನಾರ್ಮಲ್​ ರೀಡಿಂಗ್​​ಗಿಂತ 5ಪಟ್ಟು ಹೆಚ್ಚು ಅಂದರೆ 180ರಷ್ಟಿತ್ತು.

ಮಾರ್ಚ್ 28ರಂದು ಟೋಬರ್​ಮೋರ್​ ರಸ್ತೆಯಲ್ಲಿ ಹಾವಿನಂತೆ ಚಲಿಸಿಕೊಂಡು ಬರ್ತಿದ್ದ ಕಾರನ್ನ ತಡೆಹಿಡಿದಿದ್ದರು. ಬ್ರೆತ್​ಲೈಸರ್​ನ್ನು ಚಾಲಕ ಊದಿದ ವೇಳೆ ಬಂದ ರೀಡಿಂಗ್​ ನೋಡಿ ಪೊಲೀಸರು ಬೆಸ್ತು ಬಿದ್ದಿದ್ದಾರೆ. ಈತನನ್ನ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...