ನ್ಯೂಯಾರ್ಕ್: ಕೊರೊನಾ ಲಾಕ್‌ಡೌನ್ ಹೋಟೆಲ್ ಹಾಗೂ ಅತಿಥಿ ಸತ್ಕಾರ ಉದ್ಯಮಕ್ಕೆ ದೊಡ್ಡ ಆಘಾತ ನೀಡಿದೆ. ವಿಶ್ವಾದ್ಯಂತ ಈ ಉದ್ಯಮದಲ್ಲಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ವೇಟರ್ ಗಳು, ಅಡುಗೆಯವರು ಹೊಸ ಕೆಲಸ ಹುಡುಕುತ್ತಿದ್ದಾರೆ.
ಕೆಲವರು ಕೆಲಸಕ್ಕೆ ಹಾಜರಾಗಿದ್ದಾರೆ. ಹೀಗೆ ಹಲವು ತಿಂಗಳಿಂದ ಕೆಲಸವಿಲ್ಲದೇ ತೊಂದರೆ ಎದುರಿಸಿ ಇತ್ತೀಚೆಗಷ್ಟೇ ಕೆಲಸಕ್ಕೆ ಹಾಜರಾದ ಅಮೇರಿಕಾದ ಪಬ್ ನ ವೇಟರ್ ಒಬ್ಬಳಿಗೆ ಮಹಿಳೆಯೊಬ್ಬರು ಭಾರೀ ಪ್ರಮಾಣದ ಟಿಪ್ಸ್ ಕೊಟ್ಟು ಅಚ್ಚರಿಗೆ ಕಾರಣರಾಗಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಟಿಪ್ಸ್ ನೋಡಿ ವೇಟರ್ ಭಾವುಕಳಾದ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾರತೀಯ ಪಬ್ ನಲ್ಲಿದ್ದ ಕಾಥೆ ಟೇಲರ್ ಅವರಿಗೆ ಹಿತರ್ ಹೋಟ್ರೂಮ್ ಅವರು ಟಿಪ್ಸ್ ನೀಡಿದ್ದಾರೆ.
ಅಮೇರಿಕಾದ ರೆಸ್ಟೋರೆಂಟ್ ಗಳಲ್ಲಿ ಗರಿಷ್ಠ ಎಂದರೆ, ಬಿಲ್ ನ ಶೇ.10 ಅಥವಾ 20 ರಷ್ಟು ಟಿಪ್ಸ್ ಕೊಡುವುದು ವಾಡಿಕೆ. ಇಲ್ಲಿ ಕಾಥೆ ಅವರಿಗೆ ಮಹಿಳಾ ಗ್ರಾಹಕಿ ಶೇ.963 ರಷ್ಟು ಅಂದರೆ, 330 ಡಾಲರ್ ಹಣವನ್ನು ಟಿಪ್ಸ್ ನೀಡಿದ್ದಾರೆ. ಕಾಥೆ ಅಳುತ್ತ ಹಣ ಸ್ವೀಕರಿಸಿ ತಾನು ಹೊಸ ಶೂ ಕೊಳ್ಳುವುದಾಗಿ ಹೇಳಿದ್ದಾರೆ.
ತೊಂದರೆಯಲ್ಲಿದ್ದವರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಹಾಯ ಮಾಡುವ “ವೆನೋಮ್ ಚಾಲೆಂಜ್” ಎಂಬ ಟಾಸ್ಕ್ ಇದ್ದು, ಸಂಕಷ್ಟದಲ್ಲಿದ್ದ ಕಾಥೆ ಅವರ ಹೆಸರನ್ನು ಅವರ ಗೆಳತಿ ಸೂಚಿಸಿದ್ದರು ಎನ್ನಲಾಗಿದೆ. ಜನರಿಂದ ಸಂಗ್ರಹಿಸಿದ ಹಣವನ್ನು ಮಹಿಳಾ ಗ್ರಾಹಕಿ ಅವರಿಗೆ ನೀಡಿದ್ದಾರೆ.
https://www.facebook.com/heather.hotrum/videos/10108930519878492/?t=4