ಕೊರೊನಾ ವೈರಸ್ ಮಹಾಮಾರಿ ಜನಜೀವನವನ್ನ ಸಂಪೂರ್ಣ ಉಲ್ಟಾಪಲ್ಟಾ ಮಾಡಿ ಹಾಕಿದೆ. ಸಾಮಾಜಿಕ ಅಂತರ ಕಾಪಾಡುತ್ತಾ ಮಾಸ್ಕ್ ಧರಿಸುತ್ತಾ ಜನರು ಕೊರೊನಾದಿಂದ ಬಚಾವಾಗೋಕೆ ಪ್ರಯತ್ನ ಪಡ್ತಿದ್ದಾರೆ. ಇದೀಗ ಈ ಮಾಸ್ಕ್ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ ರೆಸ್ಟಾರೆಂಟ್ಗೆ ಬಂದ ಯುವತಿಯೊಬ್ಬರು ಮಾಸ್ಕ್ ಧರಿಸಲು ನಿರಾಕರಿಸುತ್ತಾರೆ. ಅಂದಹಾಗೆ ಮಾಸ್ಕ್ ಧರಿಸದೇ ಇರಲು ಮುಖ್ಯ ಕಾರಣ ಲಿಪ್ಸ್ಟಿಕ್ ಹಾಳಾಗುತ್ತೆ ಎಂಬ ಭಯವಂತೆ..! ಇದೇ ಕಾರಣಕ್ಕೆ ಯುವತಿ, ವೇಟರ್ ಜೊತೆ ವಾಗ್ವಾದಕ್ಕೂ ಇಳಿದಿದ್ದಾಳೆ. ವೇಟರ್ ಬಳಿಕ ತನ್ನ ಮ್ಯಾನೇಜರ್ನ್ನು ಕರೆಯುತ್ತಾಳೆ. ಆದರೂ ಯುವತಿ ತನ್ನ ವಾದವನ್ನೇ ಮುಂದುವರಿಸುತ್ತಾಳೆ.
ಇದರಿಂದ ಆಕ್ರೋಶಗೊಂಡ ಮಹಿಳಾ ವೇಟರ್ ನಿಮ್ಮಂಥವರಿಂದಲೇ ನಮಗೆ ಕೆಲಸ ಮಾಡಲು ಕಷ್ಟವಾಗುತ್ತೆ ಎಂದು ಹೇಳಿ ಕೆಲಸವನ್ನೇ ಬಿಟ್ಟು ರೆಸ್ಟಾರೆಂಟ್ನಿಂದ ತೆರಳುತ್ತಾಳೆ. ಮಹಿಳಾ ವೇಟರ್ ರೆಸ್ಟಾರೆಂಟ್ನಿಂದ ತೆರಳಿದ ಬಳಿಕ ಗ್ರಾಹಕಿ ಮಾಸ್ಕ್ನ್ನು ಧರಿಸಿ ಮ್ಯಾನೇಜರ್ ಬಳಿ ಈಗ ನಿಮಗೆ ತೃಪ್ತಿಯಾಯಿತೇ ಎಂದು ಕೇಳಿದ್ದಾಳೆ. ಇದು ಅಮೆರಿಕದ ರೆಸ್ಟಾರೆಂಟ್ ಒಂದರಲ್ಲಿ ತೆಗೆದ ಹಳೆಯ ವಿಡಿಯೋ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
https://youtu.be/eBBrZvdeHKw?t=1