
ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೊರೋನಾ ವೈರಸ್ ನಿಂದ ಬಚಾವಾಗಲು ತಮ್ಮ ನಿವಾಸದಲ್ಲಿ ಸೋಂಕು ನಿವಾರಕ ಸುರಂಗವನ್ನು ಸ್ಥಾಪಿಸಿಕೊಂಡಿದ್ದಾರೆ.
ಮಾಸ್ಕೊ ಹಾಗೂ ಕ್ರೆಮ್ಲಿನ್ ನಿವಾಸದ ಹೊರಗೆ ಸುರಂಗ ಅಳವಡಿಸಿರುವುದನ್ನು ಅವರ ವಕ್ತಾರ ಡಿಮಿಟ್ರಿ ಪಾಸ್ಕೋವ್ ಖಚಿತಪಡಿಸಿದ್ದಾರೆ.
“ಅಧ್ಯಕ್ಷರ ಮುಖ್ಯ ಕಾರ್ಯ ಕ್ಷೇತ್ರ ಕ್ರೆಮ್ಲಿನ್ ನಲ್ಲಿ ಎರಡು ಸುರಂಗಗಳನ್ನು ಅಳವಡಿಸಲಾಗಿದೆ” ಎಂದಿದ್ದಾರೆ.
ಮಿಜೊಟ್ಟಿ ಎಂಬ ಕಂಪನಿ ಈ ಸುರಂಗವನ್ನು ಮೂರು ವಾರಗಳ ಹಿಂದಷ್ಟೇ ಅಳವಡಿಸಿದೆ.
“ರಷ್ಯಾ ಸರ್ಕಾರದಿಂದ ಅನುಮೋದಿತ ಸೋಂಕು ನಿರೋಧಕ ಅನೋಲಿಟ್ ನ್ನು ಇದರಲ್ಲಿ ಬಳಸಲಾಗಿದೆ ಎಂದು ಕಂಪನಿಯ ಉಪ ಮುಖ್ಯಸ್ಥರಾದ ನತಾಲ್ಯಾ ಸ್ಪಿರಿನಾ ಅವರು ತಿಳಿಸಿದ್ದಾರೆ.
ಕೊರೋನಾ ಮಹಾಮಾರಿಯಿಂದ ಅತಿ ಹೆಚ್ಚು ಬಾಧಿತವಾದ ದೇಶಗಳ ಪೈಕಿ ಅಮೆರಿಕಾ, ಬ್ರೆಜಿಲ್ ಬಿಟ್ಟರೆ ರಷ್ಯಾ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ 5.5 ಲಕ್ಷ ಜನರಿಗೆ ಸೋಂಕು ತಗುಲಿದ್ದು, 7,400 ಜನ ಮೃತಪಟ್ಟಿದ್ದಾರೆ. ಇದರಿಂದ ರಷ್ಯಾ ಅಧ್ಯಕ್ಷರೂ ರೋಗದಿಂದ ಬಚಾವಾಗಲು ಸಾಕಷ್ಟು ಕ್ರಮಗಳನ್ನು ವಹಿಸಿದ್ದಾರೆ.