ವಾಷಿಂಗ್ಟನ್: ಅಮೆರಿಕದ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಹೆಚ್ 1ಬಿ ವೀಸಾ ಕುರಿತಾದ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಹೆಚ್ 1ಬಿ ವೀಸಾ ಅಡಿಯಲ್ಲಿ ತಂತ್ರಜ್ಞಾನ ಉದ್ಯೋಗಿಗಳಿಗೆ ಅವಕಾಶ ನೀಡದಿರುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಅಮೆರಿಕದವರಿಗೆ ಮೊದಲಿಗೆ ಉದ್ಯೋಗಗಳನ್ನು ನೀಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಅಮೆರಿಕಾ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆಗಳಿಗೆ ತಂತ್ರಜ್ಞಾನ ಸೇವೆ ನೀಡುತ್ತಿದ್ದ ಭಾರತೀಯ ಮೂಲದ ಕಂಪನಿಗಳಿಗೆ ಹೊಡೆತ ಬೀಳಲಿದೆ.
ಅಮೆರಿಕ ನಾಗರಿಕರನ್ನು ಸ್ಪರ್ಧಾತ್ಮಕ ಸೇವೆಗೆ ನೇಮಿಸುವ ಅವಶ್ಯಕತೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಫೆಡರಲ್ ಏಜೆನ್ಸಿಗಳಿಗೆ ಇದು ಅನ್ವಯವಾಗಲಿದೆ. ಹೆಚ್ 1ಬಿ ವೀಸಾ ಉದ್ಯೋಗದಾತರಿಗಿಂತ ಮುಖ್ಯವಾಗಿ ಅಮೆರಿಕ ಜನರಿಗೆ ಆದ್ಯತೆ ನೀಡಬೇಕೆಂದು ಹೇಳಲಾಗಿದೆ.