ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ದಿನದಿಂದ ಒಂದಿಲ್ಲೊಂದು ಎಡವಟ್ಟಿನ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಸ್ಫರ್ಧೆಗೆ ಬಿದ್ದ ರೀತಿ ವಿವಿಧ ದೇಶದ ರಾಜಕಾರಣಿಗಳು ಕೊರೊನಾ ಬಗ್ಗೆ ಎಡವಟ್ಟಿನ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಈ ಸಾಲಿಗೆ ಪಾಕಿಸ್ತಾನದ ರಾಜಕಾರಣಿ ಸೇರಿದ್ದಾರೆ.
ಹೌದು, ಪಾಕ್‌ನ ಫಜಲ್ ಉರ್ ರೆಹಮಾನ್ ಇದೀಗ, ಹಾಸ್ಯಾಸ್ಪದ ಹೇಳಿಕೆ ನೀಡಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಕೆಲ ದಿನಗಳ ಹಿಂದೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ, ರೆಹಮಾನ್ ಅವರು, ಕೊರೊನಾ ವೈರಸ್ ನಾವು ಮಲಗಿಕೊಂಡಾಗ ಅದು ಮಲಗಿರುತ್ತದೆ ಎನ್ನುವ ಹೇಳಿಕೆ ನೀಡಿದ್ದಾರೆ. ಇದೀಗ ಈ ಹೇಳಿಕೆ ಭಾರಿ ವೈರಲ್ ಆಗಿದ್ದು, ನಗೆಪಾಟಲಿಗೆ ಈಡಾಗಿದ್ದಾರೆ.
ಸುಮಾರು ಎರಡು ದಶಕದ ಕಾಲ ಪಾಕಿಸ್ತಾನದ ಸಂಸತ್ ಸದಸ್ಯರಾಗಿರುವ ಅವರು, ಜನ ಹೆಚ್ಚು ಹೊತ್ತು ಮಲಗಿದರೆ ಕೊರೊನಾ ಬರುವುದಿಲ್ಲ. ಆದ್ದರಿಂದ ಹೆಚ್ಚೆಚ್ಚು ಮಲಗುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳಿ ಎನ್ನುವ ಮಾತನ್ನು ಹೇಳಿದ್ದಾರೆ.
ಈ ವಿಡಿಯೊವನ್ನು ಪಾಕ್ ಪತ್ರಕರ್ತೆ ನೈಲಾ ಇನಾಯತ್ ಶೇರ್ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋವನ್ನು ಸುಮಾರು 31 ಸಾವಿರ ಮಂದಿ ನೋಡಿದ್ದು, 1400ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಇನ್ನು ಈ ವಿಡಿಯೋ ಭಾರಿ ಟ್ರೋಲ್ ಆಗುತ್ತಿದೆ.
https://twitter.com/TeddyPaints/status/1271910547470995456?ref_src=twsrc%5Etfw%7Ctwcamp%5Etweetembed%7Ctwterm%5E1271910547470995456&ref_url=https%3A%2F%2Fwww.timesnownews.com%2Fthe-buzz%2Farticle%2Fvirus-sleeps-when-we-sleep-pak-politicians-bizarre-coronavirus-logic-goes-viral-watch%2F606546