ದ್ವಿತೀಯ ವಿಶ್ವ ಮಹಾಯುದ್ಧದ ಕಾಲದ ಬಾಂಬೊಂದನ್ನು ನೌಕಾಪಡೆ ಸಿಬ್ಬಂದಿ ನಿಷ್ಕ್ರಿಯಗೊಳಿಸಲು ಬಂದ ವೇಳೆ ಸ್ಫೋಟಗೊಂಡ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯು ಪೋಲೆಂಡ್‌ನ ಷೆಸಿನ್ ಬಂದರಿನ ಬಳಿ ಜರುಗಿದೆ.
ಸೆಪ್ಟೆಂಬರ್ 2019ರಲ್ಲಿ 5.4 ಪೌಂಡ್ ತೂಗುವ ಈ ಬಾಂಬ್ ಪತ್ತೆಯಾಗಿದ್ದು, ಆ ಕೂಡಲೇ ನಿಷ್ಕ್ರಿಯಗೊಳಿಸುವುದನ್ನು ಸಿಬ್ಬಂದಿ ಮಾಡಿಲ್ಲ. ಇದಾದ ವರ್ಷದ ಬಳಿಕ, ಅಕ್ಟೋಬರ್ 2020ರಲ್ಲಿ ನೌಕಾಪಡೆಯ ತಜ್ಞರ ತಂಡವೊಂದು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ನೀರಿನಿಂದ ಬಾಂಬನ್ನು ಮೇಲೆತ್ತುವ ಯತ್ನದಲ್ಲಿಯೇ ಆ ಬಾಂಬ್ ಜಲದಾಳದಲ್ಲೇ ಸ್ಫೋಟಗೊಂಡಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆ ವೇಳೆಯಲ್ಲಿ ಬಾಂಬ್ ಅನ್ನು ಮೇಲೆತ್ತಲು ತೆರಳತಿದ್ದ ಡೈವರ್‌ಗಳು ಸುರಕ್ಷಿತ ಅಂತರದಲ್ಲಿದ್ದರು. ಘಟನೆಗೂ ಮುನ್ನ ಆ ಪ್ರದೇಶದಲ್ಲಿರುವ ಮನೆಗಳಲ್ಲಿ ವಾಸವಿದ್ದ 750ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷತೆಯ ದೃಷ್ಟಿಯಿಂದ ತೆರವುಗೊಳಿಸಲಾಗಿದೆ.
ಕೊರೊನಾ ಪಾಸಿಟಿವ್ ಎಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಬಾಂಬ್ ಇದ್ದ ಜಾಗದ ಸುತ್ತಲಿನ 2.4 ಕಿಮೀ ತ್ರಿಜ್ಯದಲ್ಲಿ ಬರುವ ಜಾಗವನ್ನು ನಿಷೇಧ ವಲಯವನ್ನಾಗಿ ಘೋಷಿಸಲಾಗಿತ್ತು. ಬಾಂಬ್ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ವೈರಲ್ ಆಗಿತ್ತು. ಇದೀಗ ಇದು ಮತ್ತೊಮ್ಮೆ ವೈರಲ್ ಆಗಿದೆ.