
ಸಂಪೂರ್ಣ ವಿಶ್ವ ಕರೊನಾಗೆ ತುತ್ತಾಗಿ 10 ತಿಂಗಳುಗಳೇ ಆಗ್ತಾ ಬಂದಿದೆ. ಇಷ್ಟರಲ್ಲಾಗಲೇ 1 ಮಿಲಿಯನ್ಗೂ ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್ಗಳನ್ನ ಬಳಸಿ ಕರೊನಾದಿಂದ ದೂರಾಗಲು ಯತ್ನಿಸ್ತಾ ಇದ್ರೆ, ಇಲ್ಲೊಬ್ಬ ಮಹಿಳೆ ಮಾಸ್ಕ್ ಧರಿಸಲು ನಿರಾಕರಿಸಿ ವಿಮಾನದಿಂದ ಹೊರನಡೆದಿದ್ದಾಳೆ.
ಫೇಸ್ ಮಾಸ್ಕ್ ಧರಿಸಲು ನಿರಾಕರಿಸಿದ ಮಹಿಳೆ ಕೋಪದಿಂದ ವಿಮಾನದಿಂದ ಹೊರಬರ್ತಿರೊ ದೃಶ್ಯ ಸದ್ಯ ಟ್ವಿಟರ್ನಲ್ಲಿ ಟಾಕ್ ಆಫ್ ದ ಟೌನ್ ಆಗಿದೆ. ಅಕ್ಟೋಬರ್ 18ರಂದು ನಡೆದ ಘಟನೆ ಇದಾಗಿದ್ದು ಬೆಲ್ಫಾಸ್ಟ್ನಿಂದ ಎಡಿನ್ಬರ್ಗ್ಗೆ ಹೊರಟಿದ್ದ ವಿಮಾನದಲ್ಲಿದ್ದ ಸ್ಕಾಟಿಷ್ ಮಹಿಳೆ ಈ ರೀತಿ ಗಲಾಟೆ ಮಾಡಿದ್ದಾಳೆ .
ಎಲ್ಲರೂ ಸಾಯುತ್ತಾರೆ. ಪ್ರತಿಯೊಬ್ಬರ ಜೀವನವೂ ಕೊನೆಯಾಗುತ್ತೆ. ಕರೊನಾ ಇರಲಿ ಇಲ್ಲದೇ ಇರಲಿ ಎಲ್ಲರೂ ಒಂದಲ್ಲ ಒಂದು ದಿನ ಸಾಯೋದೇ ಎಂದು ಕೂಗಿದ ಮಹಿಳೆಯನ್ನ ವಿಮಾನದಲ್ಲಿದ್ದ ಸಿಬ್ಬಂದಿ ಕೆಳಗಿಳಿಸಿದ್ದಾರೆ. ಮಹಿಳೆಯ ದುರ್ಬುದ್ಧಿಯನ್ನ ಕಂಡ ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ.