
ಸೀಗಲ್ ಪಕ್ಷಿ ಒಂದು ಇಡೀ ಇಲಿಯನ್ನು ತಿಂದ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುನೈಟೆಡ್ ಕಿಂಗ್ ಡಮ್ ನ ನಾಟಿಂಗ್ ಹಿಲ್ ಪ್ರದೇಶದಲ್ಲಿ ಜು.2 ರಂದು ನಡೆದ ಘಟನೆಯನ್ನು ಮನೆಯ ಕಿಟಕಿಯಿಂದ ಆಲಿಸನ್ ರೈಸ್ ಎಂಬುವವರು ವಿಡಿಯೋ ಮಾಡಿದ್ದಾರೆ.
ಸೀಗಲ್ ತಾನೇ ಇಲಿಯನ್ನು ಕೊಂದು ತಿಂದಿದೆ. ಇಲಿ ಕೊಲ್ಲುವ ವಿಡಿಯೋ ಲಭ್ಯವಾಗಿಲ್ಲ. ಜೋಡಿ ಸೀಗಲ್ ಗಳು ಸ್ಥಳದಲ್ಲಿವೆ. ಆದರೆ, ಇನ್ನೊಂದು ಪಕ್ಷಿಯು ಆಹಾರ ತಿನ್ನಲು ಹೋರಾಟ ನಡೆಸಿದರೂ ಅದಕ್ಕೆ ಅವಕಾಶ ನೀಡದೇ ಒಂದೇ ಸೀಗಲ್ ಇಡೀ ಇಲಿಯನ್ನು ತಿಂದು ಹಾಕಿದೆ. “ಕೊರೋನಾ ಲಾಕ್‌ಡೌನ್ ಕಾರಣದಿಂದ ಪಕ್ಷಿಗೆ ಆಹಾರದ ಕೊರತೆ ಆಗಿರಬೇಕು” ಎಂದು ಆಲಿಸನ್ ಬರೆದುಕೊಂಡಿದ್ದಾರೆ.
ಪ್ರಾಣಿ ಪಕ್ಷಿಗಳ ವಿಡಿಯೋಗಳು ಜಾಲತಾಣಗಳಲ್ಲಿ ಬಹು ಬೇಗನೇ ವೈರಲ್ ಆಗುತ್ತವೆ. ಕಳೆದ ವಾರ ಸೀಗಲ್ ಒಂದು ಸತ್ತ ಕಾಗೆ ತಿನ್ನುವ ವಿಡಿಯೋ ವೈರಲ್ ಆಗಿತ್ತು. ಅದನ್ನು ನೋಡಿದರೆ, ಲಾಕ್ ಡೌನ್ ನಿಂದ ಪಕ್ಷಿಗಳಿಗೂ ಆಹಾರದ ಕೊರತೆ ಉಂಟಾಯಿತೇ ಎಂಬ ಅನುಮಾನ ಮೂಡುತ್ತದೆ.