ಅನಿವಾಸಿ ಭಾರತೀಯ ಮಹಿಳೆಯೊಬ್ಬರು ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಇರುವ ತೊಡಕುಗಳ ಬಗ್ಗೆ ಬೇಸರಗೊಂಡು ಅಳುತ್ತಾ ಮಾತನಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಳುತ್ತ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿನ ಆಚರಣೆಗಳ ಬಗ್ಗೆ ಪ್ರಶ್ನೆ ಮಾಡಿದಾಗ, ನಿನಗೆ ಧರ್ಮದ ಇತಿಹಾಸದ ಬಗ್ಗೆ ಗೊತ್ತಿಲ್ಲ, ಶ್ರದ್ಧೆಯೂ ಇಲ್ಲ ಎಂದು ಪಾಲಕರು ಗದರುತ್ತಾರೆ. ಆದರೆ, ವಿದೇಶಗಳಲ್ಲಿ ಬಿಂದಿ ಹಚ್ಚಿಕೊಂಡರೆ ಹೀಯಾಳಿಸುತ್ತಾರೆ. ಕೆಲವು ದೇಶಗಳು ಬಿಂದಿಯನ್ನು ಬ್ಯಾನ್ ಮಾಡಲು ಹೊರಟಿವೆ. ನಾವು ಇದರ ಬಗ್ಗೆ ಮಾತನಾಡಲು ಹೊರಟರೆ ಇದು ಅಲ್ಲಿ ಚರ್ಚೆಯ ವಿಷಯವೇ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸೀರೆ ಉಟ್ಟು, ಬಿಂದಿ ಇಟ್ಟು ಇಂಗ್ಲಿಷ್ ಆ್ಯಕ್ಸಂಟ್ ನಲ್ಲಿ ನಮಸ್ತೆ ಎಂದು ಹೇಳುವುದು, ಬೇರೆ ಧರ್ಮದವರು ಅವರ ಆಚರಣೆ ಮಾಡಿದ ಹಾಗೆ ಸ್ವೀಕರಿಸುವುದಿಲ್ಲ ಎಂದು ಅಳುತ್ತ ಹೇಳಿದ್ದಾರೆ. ಆಕೆ ಆಳುತ್ತ ಇನ್ನೂ ಹತ್ತಾರು ಉದಾಹರಣೆ ನೀಡಿದ್ದಾರೆ.
https://www.facebook.com/momin.chomsky/videos/187626926236945/?t=1