ಹಿಪ್ ಹಾಪ್ ಹಾಗೂ ಭರತನಾಟ್ಯ ಸಮ್ಮಿಳಿತಗೊಳಿಸಿದ ಹೈಬ್ರಿಡ್ ನಾಟ್ಯವೊಂದರ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಆದರೆ, ಜಾಲತಾಣದಲ್ಲಿ ಇದರ ಪರ-ವಿರೋಧದ ಚರ್ಚೆ ಶುರುವಾಗಿದ್ದು, ಶಾಸ್ತ್ರೀಯ ನೃತ್ಯವನ್ನು ಹಿಪ್ ಹಾಪ್ ಒಟ್ಟಿಗೆ ಬೆರೆಸಿದ್ದು ತಪ್ಪು ಎಂಬ ವಾದ ಒಂದು ಕಡೆಯಾದರೆ, ಎರಡರ ಸಮ್ಮಿಳಿತದಿಂದ ಹೊಸದೊಂದು ನೃತ್ಯ ಪ್ರಾಕಾರ ಹುಟ್ಟಿಕೊಳ್ಳಬಹುದು ಎಂಬ ಮತ್ತೊಂದು ವಾದವೂ ನಡೆದಿದೆ.
ಅದೇನೆ ಇದ್ದರೂ 37 ಸಾವಿರಕ್ಕೂ ಹೆಚ್ಚು ಜನರು viಡಿಯೋ ವೀಕ್ಷಿಸಿದ್ದು, ಹಳದಿ ಸೀರೆಯುಟ್ಟ ಇಬ್ಬರು, ತಲೆಗೂದಲಿಗೆ ಹೂವು ಮುಡಿದು, ಹಿಪ್ ಹಾಪ್ ಹಾಗೂ ಭರತನಾಟ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಪ್ಯಾರಿಸ್ ನಿಂದ ವಿಡಿಯೋ ಪೋಸ್ಟ್ ಮಾಡಿರುವ ಉಷಾ ಜೇ ಎಂಬುವರು, ನಾನಿದನ್ನು ಹೈಬ್ರಿಡ್ ಭಾರತ ಎನ್ನುತ್ತೇನೆ. ನಾನು ಇಷ್ಟಪಡುವ ಎರಡು ನೃತ್ಯ ಪ್ರಾಕಾರಗಳನ್ನು ಸಮ್ಮಿಳಿತಗೊಳಿಸಿದ್ದೇನೆ. ಸದಾ ನನ್ನ ಮೊದಲ ಪ್ರೀತಿ ಏನಿದ್ದರೂ ಹಿಪ್ ಹಾಪ್. ಆದರೆ, ಭರತನಾಟ್ಯದ ಬಗ್ಗೆ ಅಪಾರ ಆದರ ಇದೆ. ಭರತನಾಟ್ಯದಲ್ಲಿ ನಾನಷ್ಟು ನಿಪುಣಳಲ್ಲ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CDT-y1MqZI8/?utm_source=ig_embed