alex Certify ಅಬ್ಬಾ….! ಬೆರಗಾಗಿಸುವಂತಿದೆ ಈತನ ಕರ್ತವ್ಯ ನಿಷ್ಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಬೆರಗಾಗಿಸುವಂತಿದೆ ಈತನ ಕರ್ತವ್ಯ ನಿಷ್ಟೆ

ತುರ್ತು ಕರೆ ಬಂದ ತಕ್ಷಣವೇ ಚೀನಾದ ಅಗ್ನಿಶಾಮಕ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಕೆಲಸವನ್ನ ಹಾಗೆಯೇ ಬಿಟ್ಟು ಸೇವೆಗೆ ಹಾಜರಾಗಲು ಅಣಿಯಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಪಡೆಯುತ್ತಿದೆ. 23 ವರ್ಷದ ವ್ಯಕ್ತಿ ಸ್ನಾನ ಮಾಡುತ್ತಿದ್ದ ವೇಳೆ ಅಲಾರಂ ಬಾರಿಸಿದ್ದು ಆತ ಅಲ್ಲಿಂದಲೇ ಓಡಿ ಬಂದಿದ್ದಾನೆ. ಓಡುವ ರಭಸದಲ್ಲಿ ಆತನ ಚಪ್ಪಲಿ ಕೂಡ ಕಳಚಿ ಬಿದ್ದಿದೆ.

ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್​ ಪ್ರಕಾರ, ಆತ ಅಗ್ನಿಶಾಮಕ ವಾಹನ ಏರುವ ವೇಳೆಯಲ್ಲಿ ವ್ಯಕ್ತಿಯ ತಲೆಯಲ್ಲಿ ಶಾಂಪೂ ಇನ್ನೂ ಹಾಗೆಯೇ ಇತ್ತು. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ, ನನಗೆ ಸೈರನ್​ ಶಬ್ದ ಕೇಳುತ್ತಿದ್ದಂತೆಯೇ ಏನು ಮಾಡೋದು ಅಂತಾ ಅರ್ಥವಾಗಲಿಲ್ಲ. ನಾನು ತಕ್ಷಣವೇ ಸ್ನಾನಗೃಹದಿಂದ ಓಡಿ ಬಂದೆ ಎಂದು ಹೇಳಿದ್ದಾರೆ. ಆದರೆ ಇದೊಂದು ಹುಸಿ ಕರೆಯಾಗಿತ್ತು. ಆದರೂ ಈ ವ್ಯಕ್ತಿಯ ಕರ್ತವ್ಯನಿಷ್ಠೆಗೆ ನೆಟ್ಟಿಗರು ತಲೆಬಾಗಿದ್ದಾರೆ.

ಅಂದಹಾಗೆ ಇದೇನು ಮೊದಲಬಾರಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಈ ರೀತಿ ಕರ್ತವ್ಯನಿಷ್ಠೆ ಮೆರೆದಿದ್ದಲ್ಲ. ಈ ಹಿಂದೆ ಅಗ್ನಿಶಾಮಕ ದಳ ಸಿಬ್ಬಂದಿಯೊಬ್ಬ ತನ್ನ ಮಗು ಹಾಗೂ ಪತ್ನಿಯ ಜೊತೆ ಸಮಯ ಕಳೆಯುತ್ತಿದ್ದ ವೇಳೆ ಸೈರನ್ ಶಬ್ದ ಕೇಳಿದ್ದು ಆತ ಮಗುವನ್ನ ಅಲ್ಲೇ ಬಿಟ್ಟು ಸೇವೆಗೆ ಹಾಜರಾಗಲು ಸ್ಥಳದಿಂದ ಓಡಿ ಹೋಗಿದ್ದ. ಈ ವಿಡಿಯೋ ಕೂಡ ಭಾರೀ ವೈರಲ್​ ಆಗಿತ್ತು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...