ಸಾರ್ವಜನಿಕ ಸಾರಿಗೆಗಳಲ್ಲಿ ಸಂಚಾರ ಮಾಡುವ ಮುನ್ನ ಟಿಕೆಟ್ಗಳನ್ನ ಹೊಂದಿರೋದು ಅನಿವಾರ್ಯ. ಒಂದು ವೇಳೆ ಟಿಕೆಟ್ ಇಲ್ಲದೇ ನೀವು ಪ್ರಯಾಣ ಮಾಡುತ್ತಿದ್ದಲ್ಲಿ ನಿಮ್ಮನ್ನ ಯಾವ ಸಮಯದಲ್ಲಿ ಬೇಕಿದ್ದರೂ ವಾಹನದಿಂದ ಇಳಿಸಿಹಾಕುವ, ದಂಡ ವಿಧಿಸುವ ಭಯ ಇದ್ದೇ ಇರುತ್ತೆ. ಆದರೆ ನಿಮ್ಮನ್ನ ರೈಲಿನಿಂದ ಕೆಳಗಿಳಿಸುವ ಮುನ್ನ ನೀವು ತಪ್ಪಿಸಿಕೊಳ್ಳೋಕೆ ಯಾವ ಪ್ಲಾನ್ಗಳನ್ನ ಬಳಕೆ ಮಾಡುತ್ತೀರಾ..?
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗ್ತಿರೋ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಈ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಾರ್ವಜನಿಕ ಸಾರಿಗೆಯ ಕಿಟಕಿಯಿಂದ ಎಸ್ಕೇಪ್ ಆಗಿದ್ದಾನೆ.
ನೀಲಿ ಬಣ್ಣದ ಜೀನ್ಸ್ ಹಾಗೂ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಟಿಕೆಟ್ ಇನ್ಸ್ಪೆಕ್ಟರ್ನನ್ನು ನೋಡುತ್ತಿದ್ದಂತೆಯೇ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ. ಇದೇ ರೈಲಿನಲ್ಲಿದ್ದ ಸಹಪ್ರಯಾಣಿಕ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ.
ಉಕ್ರೇನ್ನ ಚೆರ್ಕೆಸಿ ಎಂಬಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟಿಕೆಟ್ ಹೊಂದಿರದ ವ್ಯಕ್ತಿಯನ್ನ ಸಂಪರ್ಕಿಸಿದ ಇನ್ಸ್ಪೆಕ್ಟರ್ ಹಣ ಪಾವತಿ ಮಾಡಲು ಹೇಳುತ್ತಿದ್ದಂತೆಯೇ ಆತ ಚಲಿಸುವ ಟ್ರೇನ್ನ ಕಿಟಕಿ ಮೂಲಕ ಎಸ್ಕೇಪ್ ಆಗಿದ್ದಾನೆ.