ಮಹಿಳೆಯೊಬ್ಬಳು ತನ್ನ ಕೈ ಬೆರಳುಗಳು ಇದ್ದಕ್ಕಿದ್ದಂತೆ ಬೆಳ್ಳಗಾಗಿಬಿಡುವ ವಿಚಿತ್ರ ಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಇದೇ ವಿಚಾರಕ್ಕೆ ಭಾರೀ ಸುದ್ದಿಯಾಗ್ತಿದ್ದಾರೆ.
ಅಂದ ಹಾಗೆ ಇದು ಬಿಳಿ ತೊನ್ನು ಸಮಸ್ಯೆಯಲ್ಲ. ಈ ಮಹಿಳೆಯ 23 ವರ್ಷದ ಪುತ್ರಿ ಜ್ಯೂಲಿ ತನ್ನ ತಾಯಿಯ ವಿಚಿತ್ರ ಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಮೋನಿಕಾ ಎಂಬವರ ಎರಡು ಬೆರಳುಗಳು ಬೆಳ್ಳಗಾಗಿರೋದನ್ನ ನೀವು ನೋಡಬಹುದಾಗಿದೆ. ಇದು ರಕ್ತನಾಳದ ಅಪರೂಪದ ಸ್ಥಿತಿಯಾಗಿದೆ. ಇದರಲ್ಲಿ ಸಣ್ಣ ಅಪದಮನಿಗಳು ರಕ್ತದ ಹರಿಯುವಿಕೆಯನ್ನ ಕಡಿಮೆ ಮಾಡುತ್ತವೆ. ಈ ಸಂದರ್ಭದಲ್ಲಿ ರಕ್ತದ ಹರಿಯುವಿಕೆಯ ಕೊರತೆಯಿಂದಾಗಿ ಬೆರಳುಗಳು ಸಂಪೂರ್ಣ ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಮೋನಿಕಾಗೆ ಶೀತವಾದಾಗ ಅಥವಾ ಆಕೆಗೆ ಚಿಂತೆ ಶುರುವಾದಾಗ ಈ ರೀತಿ ಕೈ ಇಲ್ಲವೇ ಕಾಲಿನ ಬೆರಳುಗಳು ಬೆಳ್ಳಗಾಗುತ್ತವೆ. ಮಾತ್ರವಲ್ಲದೇ ಈ ಬೆಳ್ಳಗಾದ ಬೆರಳುಗಳು ಕೆಲಕಾಲ ಸ್ಪರ್ಶ ಜ್ಞಾನವನ್ನೂ ಕಳೆದುಕೊಳ್ಳುತ್ತದೆಯಂತೆ.
ನನ್ನ ತಾಯಿ ರೇನಾಡ್ಸ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈಕೆಗೆ ಕಳೆದ 20 ವರ್ಷಗಳಿಂದ ಈ ಸಮಸ್ಯೆ ಇದೆ. ಅಪಧಮನಿಗಳು ಸಣ್ಣಗಾಗೋದ್ರಿಂದ ರಕ್ತದ ಹರಿವಿನಲ್ಲಿ ಅಭಾವ ಉಂಟಾಗಿ ಈ ಸಮಸ್ಯೆ ತಲೆದೋರುತ್ತದೆ. ಇದರಿಂದಾಗಿ ಬೆರಳುಗಳು ಬೆಳ್ಳಗಾಗೋದ್ರ ಜೊತೆಗೆ ಸ್ಪರ್ಶಜ್ಞಾನವನ್ನೂ ಕಳೆದುಕೊಳ್ಳುತ್ತೆ ಎಂದು ಜ್ಯೂಲಿ ಹೇಳಿದ್ದಾರೆ.