ಮೆಲ್ಬೋರ್ನ್: ಡಾಲ್ಫಿನ್‌ಗಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಸ್ಟ್ರೇಲಿಯಾದ ಕೊಳವೊಂದರ ವಿಡಿಯೋವನ್ನು ಡ್ರೋನ್ ಶೃಂಕ್ ಆಪ್‌ನಲ್ಲಿ ಚಿತ್ರೀಕರಿಸಿ ಶೇರ್ ಮಾಡಲಾಗಿದೆ.
30 ಸೆಕೆಂಡ್‌ನ ಈ ವಿಡಿಯೋವನ್ನು ಆಸ್ಟ್ರೇಲಿಯಾದ ಉಪ ನಗರ ಬ್ರೊಂಟೆಯಲ್ಲಿ 2 ವಾರಗಳ ಹಿಂದೆ ಸೆರೆ ಹಿಡಿಯಲಾಗಿತ್ತು. ವಿಡಿಯೋ ನೋಡಿ ಜನ ಮಂತ್ರಮುಗ್ಧರಾಗಿದ್ದಾರೆ. ಮತ್ತೆ ಮತ್ತೆ ವಿಡಿಯೋ ನೋಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋಕ್ಕೆ ಭಾರಿ ಪ್ರತಿಕ್ರಿಯೆ ಬಂದಿದ್ದು, “ಓ ಮೈ ಗಾಡ್ ನಾನು ಒಮ್ಮೆ ಇಲ್ಲಿ ಭೇಟಿ ನೀಡಲೇಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಡಾಲ್ಫಿನ್‌ಗಳು ಮೇಲೆ, ಕೆಳಗೆ ಜಿಗಿದು ನೀರಿನೊಳಗೇ ನೃತ್ಯ ಮಾಡುವ ವಿಡಿಯೋವನ್ನು ಡ್ರೋನ್ ಮೂಲಕ ಚಿತ್ರೀಕರಣ ಮಾಡಲಾಗಿದೆ. ವಿಡಿಯೋವನ್ನು 300 ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಾಯಿ ಆಟವಾಡುವ ವಿಡಿಯೋವೊಂದು ಇದೇ ರೀತಿ ವೈರಲ್ ಜನರ ಮನ ಗೆದ್ದಿತ್ತು.
https://www.facebook.com/watch/?v=428775758275123&t=2
https://www.facebook.com/watch/?v=424319815431251&t=0
https://twitter.com/_woollyback/status/1273295000126750721?ref_src=twsrc%5Etfw%7Ctwcamp%5Etweetembed%7Ctwterm%5E1273692103101407233%7Ctwgr%5E%7Ctwcon%5Es3_&ref_url=https%3A%2F%2Fwww.news18.com%2Fnews%2Fbuzz%2Fviral-drone-footage-captures-school-of-dancing-dolphins-showing-off-synchronised-moves-in-australia-3263234.html