ರೊಮಾನಿಯಾ: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯನ್ನು ಗ್ರಾಮಸ್ಥರು ಮೇಯರ್ ಆಗಿ ಆಯ್ಕೆ ಮಾಡಿದ ಘಟನೆ ದಕ್ಷಿಣ ರೋಮಾನಿಯಾದಲ್ಲಿ ಇತ್ತೀಚೆಗೆ ನಡೆದಿದೆ. ಮರಣೋತ್ತರವಾಗಿಯೂ ಅವರು ಆ ಹುದ್ದೆಗೆ ಅರ್ಹರು ಎಂಬುದು ಗ್ರಾಮಸ್ಥರ ಅಂಬೋಣ.
ರೊಮಾನಿಯಾ ಮುನ್ಸಿಪಲ್ ಎಲೆಕ್ಷನ್ ಗೆ ಒಂದೇ ದಿನ ಮುಂಚೆ ದೇವೆಸೆಲು ಗ್ರಾಮದ ಮೇಯರ್ ಆಗಿದ್ದ ಅಲಿಮಾನ್ ಕೋವಿಡ್ 19 ನಿಂದ ಮೃತಪಟ್ಟರು. ಅವರ ಹೆಸರನ್ನು ಬ್ಯಾಲೆಟ್ ಪೇಪರ್ ನಿಂದ ತೆಗೆಯಲು ಆಗಲೇ ಕಾಲ ಮಿಂಚಿತ್ತು. ಮೇಯರ್ ಸಾವಿನ ವಿಷಯ ತಿಳಿದ ನಂತರವೂ ಮತದಾನದಲ್ಲಿ ನೂರಾರು ಗ್ರಾಮಸ್ಥರು ಸಾಲಾಗಿ ಆಗಮಿಸಿ ಅವರಿಗೇ ಮತ ಹಾಕಿದ ವಿಡಿಯೋ ಜಾಲತಾಣದಲ್ಲಿದೆ. ಅಲಿಮಾನ್ ಇದುವರೆಗೆ ಎರಡು ಬಾರಿ ಮೇಯರ್ ಆಗಿದ್ದರು. ಮರಣಾನಂತರ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
“ನೀವು ಈ ಹುದ್ದೆಗೆ ಅರ್ಹರು…..ಆರ್.ಐ.ಪಿ.ಎಂದು ಗ್ರಾಮಸ್ಥರು ಹೇಳುತ್ತ ಮತದಾನ ಕೇಂದ್ರಕ್ಕೆ ಬಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷ ಎಂದರೆ ಮತದಾನದ ದಿನ ಪ್ರಸಿದ್ಧ ಮೇಯರ್ ಅಲಿಮಾನ್ 57 ನೇ ಹುಟ್ಟಿದ ದಿನವೂ ಆಗಿತ್ತು.