
ಅದೇ ರೀತಿ ಟ್ವಿಟರ್ನಲ್ಲಿ ಫೆಬ್ರವರಿ 11ರಂದು ವಿಕಾಸ್ ಖನ್ನಾ ಕುಕ್ಕೀಸ್ ಬಾಕ್ಸಿನ ವಿಡಿಯೋವೊಂದನ್ನ ಶೇರ್ ಮಾಡಿದ್ದರು. ಈ ಫೊಟೋಗೆ ವಿಕಾಸ್ ಖನ್ನಾ ನೀಡಿದ ಶೀರ್ಷಿಕೆ ಕಂಡು ಟ್ವೀಟಿಗರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.
ವಿಡಿಯೋದಲ್ಲಿ ವಿಕಾಸ್ ಖನ್ನಾ ಕುಕ್ಕಿಗಳಿಂದ ತುಂಬಿದ್ದ ಬಾಕ್ಸಿನ ಮುಚ್ಚಳ ತೆಗೆಯುತ್ತಿರೋದನ್ನ ನೀವು ಕಾಣಬಹುದಾಗಿದೆ. ಈ ವಿಡಿಯೋಗೆ ವಿಕಾನ್ ಖನ್ನಾ, ನಾನು ಈ ಬಾಕ್ಸನ್ನು ನೋಡಿದಾಗಲೆಲ್ಲ ಇದು ಅಜ್ಜಿಯರು ತಮ್ಮ ಹೊಲಿಗೆ ಸಲಕರಣೆಗಳನ್ನ ಇಟ್ಟುಕೊಳ್ಳುವ ಬಾಕ್ಸ್ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಟ್ವಿಟರ್ನಲ್ಲಿ ವಿಕಾಸ್ ಖನ್ನಾ ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.